ADVERTISEMENT

ಶೀಘ್ರವೇ ಧರ್ಮಸ್ಥಳಕ್ಕೆ ಎಸ್‌ಐಟಿ – ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 15:57 IST
Last Updated 22 ಜುಲೈ 2025, 15:57 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸದ್ಯದಲ್ಲೇ ಧರ್ಮಸ್ಥಳಕ್ಕೆ ತೆರಳಿ ‌ತನಿಖೆ ಆರಂಭಿಸಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ತನಿಖೆಗೆ ಧರ್ಮಸ್ಥಳಕ್ಕೆ ಹೋಗುವಂತೆ ಎಸ್​ಐಟಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೂ ಸೂಚನೆ ನೀಡಿದ್ದೇವೆ’ ಎಂದರು.

ADVERTISEMENT

‘ಎಸ್‌ಐಟಿಯಿಂದ ಯಾವ ಅಧಿಕಾರಿಯೂ ಹಿಂದೆ ಸರಿದಿಲ್ಲ’ ಎಂದು ಪುನರುಚ್ಚರಿಸಿದ ಅವರು, ‘ಹೊರಗೆ ಉಳಿಯಲು ಬಯಸುವ ಅಧಿಕಾರಿಗಳು ನಮಗೆ ತಿಳಿಸಲಿ‌. ಆ ನಂತರ, ಈ ಬಗ್ಗೆ ನಾವು ನಿರ್ಧರಿಸುತ್ತೇವೆ’ ಎಂದರು.

ಬಿಜೆಪಿಯವರಿಂದ ಯಾಕೆ ಆಕ್ಷೇಪ?: ‘ಎಸ್​ಐಟಿ ರಚನೆಗೆ ಬಿಜೆಪಿಯವರು ಯಾಕೆ ಆಕ್ಷೇಪ ವ್ಯಕ್ತಪಡಿಸಬೇಕು? ಅವರ ವಿರೋಧ ನೋಡಿದರೆ ಅವರ ಮ‌ನಸ್ಸಿನಲ್ಲಿ ಏನೊ ಇರಬಹುದು’ ಎಂದರು.

ವಿಳಂಬ ಏಕೆಂದು ಗೊತ್ತಿಲ್ಲ?: ನಿಗಮ ಮಂಡಳಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, ‘ನಿಗಮ‌ ಮಂಡಳಿಗಳಿಗೆ ನೇಮಕಕ್ಕೆ ಸದಸ್ಯರ ಪಟ್ಟಿ ಕೊಡಲು 11 ಜನರ ಸಮಿತಿ ಮಾಡಿದ್ದರು. ಪಟ್ಟಿ ನೀಡಿ ಆರು ತಿಂಗಳಾಯಿತು. ಯಾಕೆ ವಿಳಂಬ ಆಗುತ್ತಿದೆ ಎನ್ನುವುದೂ ಗೊತ್ತಿಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಮ್ಮ  ಪಟ್ಟಿಯನ್ನು ಒಪ್ಪಿದ್ದಾರೆಯೇ ಎನ್ನುವುದೂ ಗೊತ್ತಿಲ್ಲ. ಮುಂದಿನ ತೀರ್ಮಾನ ಅವರಿಗೇ ಬಿಟ್ಟಿದ್ದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.