ADVERTISEMENT

ಸುವರ್ಣ ವಿಧಾನಸೌಧ ಆವರಣದಲ್ಲಿ ಎಸ್​.ಎಂ.ಕೃಷ್ಣ ಪುತ್ಥಳಿ: ಚರ್ಚಿಸಿ ತೀರ್ಮಾನ; ಸಿಎಂ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 15:42 IST
Last Updated 10 ಡಿಸೆಂಬರ್ 2024, 15:42 IST
<div class="paragraphs"><p>ಎಸ್​.ಎಂ. ಕೃಷ್ಣ</p></div>

ಎಸ್​.ಎಂ. ಕೃಷ್ಣ

   

ಸುವರ್ಣ ವಿಧಾನಸೌಧ (ಬೆಳಗಾವಿ): ‘ವಿಧಾನಸೌಧದ ಆವರಣದಲ್ಲಿ ಎಸ್​.ಎಂ. ಕೃಷ್ಣ ಅವರ ಪುತ್ಥಳಿ ನಿರ್ಮಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಎಸ್​.ಎಂ. ಕೃಷ್ಣ ಅವರ ಪುತ್ಥಳಿ ನಿರ್ಮಿಸುವಂತೆ ಶಾಸಕರು ಆಗ್ರಹಿಸುತ್ತಿರುವ ಬಗ್ಗೆ ಸುದ್ದಿಗಾರರು ಮಂಗಳವಾರ ಗಮನ ಸೆಳೆದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

ಯಾರೂ ಬರಲಿಲ್ಲ: ‘ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗದ ಅಡಿ ಮೀಸಲಾತಿ ಒದಗಿಸಬೇಕೆಂಬ ವಿಚಾರದಲ್ಲಿ ಮಾತುಕತೆಗೆ ಬರುವಂತೆ 10 ಜನ ಹೋರಾಟಗಾರರನ್ನು ನಾನು ಕರೆದಿದ್ದೆ. ಆದರೆ, ಅವರು ಯಾರೂ ಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಲಿ. ನಾವು ವಿರೋಧಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ಬಾಲಿಶ ಹೇಳಿಕೆ: ಆದಿತ್ಯ ಠಾಕ್ರೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಮಹಾಜನ ಆಯೋಗದ ವರದಿ ಅಂತಿಮ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂದು ಪದೇ ಪದೇ ಹೇಳುವುದು ಮೂರ್ಖತನ. ಬಾಲಿಶ ಹೇಳಿಕೆ. ಇದನ್ನು ಕರ್ನಾಟಕ ಸರ್ಕಾರ ಸಹಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.