ADVERTISEMENT

ಆನ್‌ಲೈನ್‌ ಮೋಸಕ್ಕೆ ಇ–ಕಾಮರ್ಸ್ ಹೊಣೆಯಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:12 IST
Last Updated 9 ಜನವರಿ 2021, 16:12 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಆನ್‌ಲೈನ್ ಮಾರುಕಟ್ಟೆಬಳಸಿಕೊಂಡು ಮಾರಾಟಗಾರರುಗ್ರಾಹಕರಿಗೆಮಾಡುವಮೋಸಕ್ಕೆಇ– ಕಾಮರ್ಸ್‌ ಸಂಸ್ಥೆಗಳು ಜವಾಬ್ದಾರಿ ಆಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸ್ನ್ಯಾಪ್‌ಡೀಲ್ಸಂಸ್ಥೆ ವಿರುದ್ಧದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸಿದನ್ಯಾಯಾಲಯ, ಈ ಅಭಿಪ್ರಾಯಪಟ್ಟಿದೆ.

ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರದರ್ಶಿಸಿರುವ ಉತ್ಪನ್ನವೊಂದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ವಿರುದ್ಧವಾಗಿದೆ ಸ್ನ್ಯಾಪ್‌ಡೀಲ್ ವಿರುದ್ಧ ಮೈಸೂರಿನ ಉಪ ಔಷಧ ನಿಯಂತ್ರಕರು ‌ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ADVERTISEMENT

ಸ್ನ್ಯಾಪ್‌ಡೀಲ್ ಪರವಾಗಿ ಹಾಜರಾದ ಹಿರಿಯ ವಕೀಲ ಸಿ.ವಿ. ನಾಗೇಶ್, ‘ಸ್ನ್ಯಾಪ್‌ಡೀಲ್ ಮಧ್ಯವರ್ತಿಯಾಗಿ ಅಷ್ಟೇ ಕೆಲಸ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ಪ್ರಕಾರ ಹೊಣೆಗಾರಿಕೆಯಿಂದ ವಿನಾಯಿತಿ ಪಡೆಯಲುಇ–ಕಾಮರ್ಸ್ ಸಂಸ್ಥೆ ಅರ್ಹವಾಗಿದೆ’ ಎಂದು ವಾದಿಸಿದರು.

‘ವೆಬ್‌ಸೈಟ್‌ನಲ್ಲಿ ಮಾರಾಟ ವಾಗುವ ಎಲ್ಲಾ ಉತ್ಪನ್ನಗಳ ಬಗ್ಗೆ ಇ–ಕಾಮರ್ಸ್ ಸಂಸ್ಥೆಯವರು ತಿಳಿದಿರಬೇಕು ಎಂದು ನಿರೀಕ್ಷಿಸಲು ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.