ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಸೇರಿದಂತೆವಿವಿಧೆಡೆ ಮಂಗಳವಾರ ಮುಂಜಾನೆ ಪ್ರವಾಹ ಪೀಡಿತ ಪ್ರದೇಶಗಳನ್ನು ಅವಲೋಕಿಸಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಸರ್ಕಾರ ಶೀಘ್ರ ವಿಶೇಷ ಪ್ಯಾಕೇಜ್ಘೋಷಿಸಲಿದೆ’ ಎಂದರು.
‘ಪ್ರವಾಹದಿಂದ ಆಗಿರುವ ಹಾನಿಯ ಅಂದಾಜು ಮಾಡಿ ಶೀಘ್ರ ವರದಿ ಸಲ್ಲಿಸಬೇಕು’ ಎಂದು ಇದೇ ಸಂದರ್ಭ ಜಿಲ್ಲಾಡಳಿತಕ್ಕೆ ಸೂಚಿಸಿದರು. ‘ಬೆಳೆನಷ್ಟವಾಗಿರುವರೈತರು ಕಂಗೆಡಬೇಕಿಲ್ಲ. ರೈತರ ಹಿತ ಕಾಡಲು ಸರ್ಕಾರ ಬದ್ಧವಾಗಿದೆ’ಎಂದು ಭರವಸೆ ನೀಡಿದರು.
ಆರೋಗ್ಯ ಇಲಾಖೆ ಮುಂಜಾಗ್ರತೆ
ಜಿಲ್ಲೆಯಲ್ಲಿ ಪ್ರವಾಹ ಇಳಿಮುಖವಾಗಿದೆ. ಇದೀಗವೈದ್ಯರ ತಂಡಹಾಗೂ ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ತೆರಳಿ ಒಆರ್‌ಎಸ್ ಮತ್ತು ಹ್ಯಾಲೋಜನ್ ಮಾತ್ರೆ ವಿತರಿಸುತ್ತಿದ್ದಾರೆ.ರೋಗಗಳು ಹರಡದಂತೆ ಮುಂಜಾಗ್ರತಾಕ್ರಮವಾಗಿ ಅಲ್ಲಲ್ಲಿಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.