ADVERTISEMENT

ದಸರಾ: ಯಶವಂತಪುರ– ಬೆಳಗಾವಿ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:00 IST
Last Updated 26 ಸೆಪ್ಟೆಂಬರ್ 2019, 20:00 IST
   

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ದಸರಾ ಹಬ್ಬಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು– ಬೆಳಗಾವಿ ನಡುವೆ ಸುವಿಧಾ ವಿಶೇಷ ರೈಲು ಓಡಿಸುತ್ತಿದೆ.

ಯಶವಂತಪುರ– ಬೆಳಗಾವಿ ರೈಲು (82657) ಅ.4ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಮರು ದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ.

ಬೆಳಗಾವಿ– ಯಶವಂತಪುರ ರೈಲು (82658) ಅ.8ರಂದು ಸಂಜೆ 7ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ತಲುಪಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.