ADVERTISEMENT

ಗಾಂಜಾ ಪತ್ತೆ ಹಚ್ಚದೆ ಕರ್ತವ್ಯ ಲೋಪ ಎಸಗಿದ ಸಿಪಿಐ ಸೇರಿ ಐವರು ಅಮಾನತು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 16:19 IST
Last Updated 12 ಸೆಪ್ಟೆಂಬರ್ 2020, 16:19 IST
ಭೋಜರಾಜ ರಾಠೋಡ
ಭೋಜರಾಜ ರಾಠೋಡ   

ಕಲಬುರ್ಗಿ: ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ ‌ಚವ್ಹಾಣ ತಮ್ಮ ಕುರಿ‌ ಶೆಡ್‌ನ ‘ರಹಸ್ಯ ಗುಂಡಿ’ಯಲ್ಲಿ 1352 ಕೆ.ಜಿ. ಗಾಂಜಾ ದಾಸ್ತಾನು ‌ಮಾಡಿದ್ದನ್ನು ಪತ್ತೆ ಹಚ್ಚದೇ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಮೂವರು ಪೊಲೀಸ್‌ ಅಧಿಕಾರಿಗಳು ಹಾಗೂ ಇಬ್ಬರು ಕಾನ್‌ಸ್ಟೆಬಲ್‌ರನ್ನು ಅಮಾನತುಗೊಳಿಸಲಾಗಿದೆ.

ಕಾಳಗಿಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಭೋಜರಾಜ ರಾಠೋಡ, ಸಬ್‌ ಇನ್‌ಸ್ಪೆಕ್ಟರ್‌ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ, ಬೀಟ್ ಪೊಲೀಸ್ ಕಾನ್‌ಸ್ಟೆಬಲ್‌ ಶರಣಪ್ಪ, ಕಾನ್‌ಸ್ಟೆಬಲ್ ಅನಿಲ್ ಭಂಡಾರಿ ಅಮಾನತುಗೊಂಡವರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.

ಕಾಳಗಿ ಪೊಲೀಸ್ ಠಾಣೆಯಿಂದ ಒಂದೂವರೆ ಕಿ.ಮೀ. ಅಂತರದಲ್ಲಿರುವ ಕುರಿ ಶೆಡ್‌ನಿಂದ ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಈಚೆಗೆ ಗಾಂಜಾ ವಶಪಡಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.