ADVERTISEMENT

₹2 ಲಕ್ಷ ವರೆಗಿನ ರೈತರ ಸಾಲ ಮನ್ನಾ: ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 6:36 IST
Last Updated 5 ಜುಲೈ 2018, 6:36 IST
   

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ ಮಂಡಿಸುತ್ತಿದ್ದಾರೆ. ಬಹುನಿರೀಕ್ಷಿತ ರೈತರ ಸಾಲದ ಬಗ್ಗೆಯು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಬಜೆಟ್ ಕುರಿತ ಅಂಶಗಳನ್ನು ಚರ್ಚಿಸಿದರು.

ಸಚಿವ ಸಂಪುಟ ಸಭೆ ಮುಗಿದ ಬಳಿಕ 11.30ರಿಂದ ಆಯವ್ಯಯ ಮಂಡಿಸುತ್ತಿದ್ದಾರೆ. 2017ರ ಡಿಸೆಂಬರ್‌ 31ವರೆಗಿನ₹2 ಲಕ್ಷ ವರೆಗಿನ ರೈತರ ಸಾಲ ಮನ್ನಾ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲಕ್ಕೆ ಅನ್ವಯವಾಗುತ್ತದೆ.

ADVERTISEMENT

ಕಾಂಗ್ರೆಸ್ ಮತ್ತು ಜೆಡಿಎಸ್‌ ಸರ್ಕಾರದ ಚೊಚ್ಚಲ ಬಜೆಟ್‌ ಇದಾಗಿದೆ. ಬಜೆಟ್‌ನ ಒಟ್ಟು ಮೊತ್ತ ₹2.18 ಲಕ್ಷ ಕೋಟಿ. ಸಿದ್ದರಾಮಯ್ಯ ಈ ಹಿಂದೆ ಮಂಡಿಸಿದ್ದ ಬಜೆಟ್‌ ಮೊತ್ತ ₹2.09 ಕೋಟಿಯಾಗಿತ್ತು.

2018–19ರ ರಾಜ್ಯ ಆಯವ್ಯಯ ಪ್ರಮುಖ ಅಂಶಗಳು:

* ಸಾಲ ಮನ್ನಾಕ್ಕೆ ₹34 ಸಾವಿರ ಕೋಟಿ ಅಗತ್ಯ

* ಅನುದಾನ ಕ್ರೋಢೀಕರಣಕ್ಕಾಗಿ ರಾಜ್ಯವ್ಯಾಪ್ತಿಯಲ್ಲಿನ ತೆರಿಗೆ ಹೆಚ್ಚಳ

* ಪೆಟ್ರೋಲ್‌ ಮೇಲೆ ₹1.14 ಹಾಗೂ ಡೀಸೆಲ್‌ ಮೇಲೆ ₹1 ತೆರಿಗೆ ಹೆಚ್ಚಳ

* ಅಬಕಾರಿ ತೆರಿಗೆ ಶೇ 4 ಏರಿಕೆ

* ಖಾಸಗಿ ಮೋಟಾರು ವಾಹನಗಳ ಮೇಲಿನ ತೆರಿಗೆ ಸರಾಸರಿ ಮುಕ್ಕಾಲು ಪಾಲು ಹೆಚ್ಚಳ

* ವಿದ್ಯುತ್‌ ಮೇಲಿನ ತೆರಿಗೆ ಶೇ 3ರಷ್ಟು ಏರಿಕೆ. ಈ ಹಿಂದೆ ಶೇ 6ರಷ್ಟು ಏರಿಕೆ ಕಂಡಿತ್ತು. ಒಟ್ಟು ಶೇ 9ರಷ್ಟು ಹೆಚ್ಚಳ

* ಗೃಹ ಬಳಕೆ ವಿದ್ಯುತ್‌ ದರ 10 ಪೈಸೆಯಿಂದ 20 ಪೈಸೆಗೆ ಏರಿಕೆ

* ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸಿರುವ ರೈತರಸಾಲಮನ್ನಾ ಆಗುವುದಿಲ್ಲ

* ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿರುವ ರೈತರಿಗೆ ಗರಿಷ್ಠ ₹25 ಸಾವಿರದ ವರೆಗೂ ಮರು ಪಾವತಿ ಸಿಗಲಿದೆ

* ಸಾಲ ಮನ್ನಾದಿಂದ 40 ಲಕ್ಷ ಪ್ರಕರಣಗಳಿಗೆ(ಸಾಲ ಪಡೆದವರು)ಅನುಕೂಲವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.