ADVERTISEMENT

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿ: ಡಾ.ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 20:15 IST
Last Updated 21 ಡಿಸೆಂಬರ್ 2019, 20:15 IST
ಕಾರ್ಯಕ್ರಮದಲ್ಲಿ ಸಿ.ಎನ್.ಅಶ್ವತ್ಥನಾರಾಯಣ್, ಪಿವಿಪಿ ವೆಲ್‌ಫೇರ್‌ ಟ್ರಸ್ಟಿಗಳಾದ ಡಾ.ಎಂ.ಮಹಾದೇವ್, ಎಸ್.ಶಿವಮಲ್ಲು, ಪಿ.ಎಲ್.ನಂಜುಂಡಸ್ವಾಮಿ, ಎಸ್.ಮರಿಸ್ವಾಮಿ ಇದ್ದರು
ಕಾರ್ಯಕ್ರಮದಲ್ಲಿ ಸಿ.ಎನ್.ಅಶ್ವತ್ಥನಾರಾಯಣ್, ಪಿವಿಪಿ ವೆಲ್‌ಫೇರ್‌ ಟ್ರಸ್ಟಿಗಳಾದ ಡಾ.ಎಂ.ಮಹಾದೇವ್, ಎಸ್.ಶಿವಮಲ್ಲು, ಪಿ.ಎಲ್.ನಂಜುಂಡಸ್ವಾಮಿ, ಎಸ್.ಮರಿಸ್ವಾಮಿ ಇದ್ದರು   

ಕೆಂಗೇರಿ: 'ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವನ್ನು ಸರಿಗಟ್ಟುವ ರಾಜ್ಯ ದೇಶದಲ್ಲಿ ಮತ್ತೊಂದಿಲ್ಲ' ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎಂ.ಎಚ್.ಜಯಪ್ರಕಾಶ್ ನಾರಾಯಣ್ ಅವರ 93ನೇ ಹುಟ್ಟು ಹಬ್ಬ ಮತ್ತು ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಪಾರಮ್ಯ ಮೆರೆದಿದೆ. ಶೇ 44ಕ್ಕೂ ಹೆಚ್ಚು ನುರಿತ ತಂತ್ರಜ್ಞಾನರು ತಮ್ಮ ಕಾರ್ಯಸ್ಥಾನವನ್ನಾಗಿ ರಾಜ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದು, ಬೆಂಗಳೂರು ತಂತ್ರಜ್ಞಾನ ಪರಿಣಿತರ ಮೊದಲ ಆಯ್ಕೆ ಆಗಿ ಪರಿವರ್ತನೆಗೊಂಡಿದೆ ಎಂದು ಹೇಳಿದರು.

ADVERTISEMENT

‘ಪ್ರಸ್ತುತ ಅಗತ್ಯ ಹಾಗೂ ಕಾಲಘಟ್ಟಕ್ಕೆ ತಕ್ಕಂತೆ ಶೈಕ್ಷಣಿಕ ಪದ್ಧತಿಗಳು ಬದಲಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಲವಾರು ಆಧುನಿಕ ಚಿಂತನೆಗಳು ಮುನ್ನೆಲೆಗೆ ಬರುತ್ತವೆ. ಧನಾತ್ಮಕ ಚಿಂತನೆಗಳಿಗೆ ವೇದಿಕೆ ಕಲ್ಪಿಸಿ ಸಾಕಾರಗೊಳಿಸಬೇಕಾಗಿರುವುದು ಅವಶ್ಯಕ’ ಎಂದು ಹೇಳಿದರು.

ಪಾಂಚಜನ್ಯ ವಿದ್ಯಾಪೀಠ ಕಲ್ಯಾಣ ದತ್ತಿ ಕಾರ್ಯದರ್ಶಿ ಡಾ.ಎಂ.ಮಹಾದೇವ ಮಾತನಾಡಿ, ‘ಸುಮಾರು 50 ಸಾವಿರ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆ ಮೂಲಕ ಪದವಿ ಪಡೆದಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

‘ಮುಂದಿನ ಸಂಸ್ಥಾಪನಾ ದಿನದಂದು ದೇಶದ ವಿವಿಧ ಭಾಗಗಳ ತಂತ್ರಜ್ಞರು ಹಾಗೂ ಕುಶಲಕರ್ಮಿಗಳನ್ನು ಒಂದುಗೂಡಿಸಿ ಕಾಲೇಜಿನಲ್ಲಿ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಲಾಗಿದೆ’ ಎಂದು ಪ್ರಾಂಶುಪಾಲ ಡಾ.ಸಿ.ನಂಜುಂಡಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.