ADVERTISEMENT

ಅಂಬುಲೆನ್ಸ್‌ಗೆ ದಾರಿ ತೋರಿದ ವಿದ್ಯಾರ್ಥಿಗೆ ಶೌರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 12:18 IST
Last Updated 15 ಆಗಸ್ಟ್ 2019, 12:18 IST
ಶೌರ್ಯ ಪ್ರಶಸ್ತಿ ಪಡೆದ ವೆಂಕಟೇಶ
ಶೌರ್ಯ ಪ್ರಶಸ್ತಿ ಪಡೆದ ವೆಂಕಟೇಶ   

ರಾಯಚೂರು:ಕೃಷ್ಣಾನದಿ ಪ್ರವಾಹದಿಂದ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್‌ ಸಂಚರಿಸುವುದಕ್ಕೆಸರಿಯಾದ ಮಾರ್ಗ ತೋರಿಸಿ ಸಾಹಸ ಮೆರೆದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವೆಂಕಟೇಶನಿಗೆ ಜಿಲ್ಲಾಧಿಕಾರಿ ಶರತ್‌ ಬಿ. ಅವರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗುರುವಾರ ಸನ್ಮಾನಿಸಿದರು.

ಮಹಿಳೆಯೊಬ್ಬರ ಮೃತದೇಹ ತೆಗೆದುಕೊಂಡು ಬಂದಿದ್ದ ಅಂಬ್ಯುಲೆನ್ಸ್‌ ಹಿರೇರಾಯಕುಂಪಿ ಬಳಿಯ ಸೇತುವೆ ದಾಟಿಕೊಂಡು ಯಾದಗಿರಿ ಜಿಲ್ಲೆಯ ಮಾಚನೂರು ಗ್ರಾಮಕ್ಕೆ ತಲುಪಬೇಕಿತ್ತು. ಆದರೆ, ಸೇತುವೆಯು ಜಲಾವೃತವಾಗಿದ್ದನ್ನು ನೋಡಿ ಮಾರ್ಗ ಕಾಣದೆ ಅಂಬ್ಯುಲೆನ್ಸ್‌ ನಿಂತುಕೊಂಡಿತ್ತು. ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೆಂಕಟೇಶ ಕೂಡಲೇ ಸೇತುವೆ ಮಾರ್ಗದುದ್ದಕ್ಕೂ ನೀರಿನಲ್ಲಿ ನಡೆಯುತ್ತಾ ಹೋಗಿ, ಅಂಬ್ಯುಲೆನ್ಸ್‌ ಸಂಚರಿಸಿ ಮುಂದೆ ಹೋಗುವುದಕ್ಕೆ ನೆರವಾಗಿದ್ದ.

ADVERTISEMENT

ಇದರ ವಿಡಿಯೋ ದೃಶ್ಯಾವಳಿಯ ತುಣುಕೊಂದು ವ್ಯಾಟ್ಸ್‌ಅ್ಯಪ್‌ನಲ್ಲಿ ವೈರಲ್‌ ಆಗಿತ್ತು. ಬಾಲಕನ ಸಾಹಸವನ್ನು ಜನರು ಮೆಚ್ಚಿಕೊಂಡಿದ್ದರು. ಇದೀಗ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಜಿಲ್ಲಾಡಳಿತವು ಶಿಫಾರಸು ಮಾಡಬೇಕು ಎಂದು ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.