ADVERTISEMENT

ಸಾಮೂಹಿಕ ವಿವಾಹ ಯೋಜನೆ: ಸುಧಾಮೂರ್ತಿ, ಪುನೀತ್, ಯಶ್ ದಂಪತಿ ರಾಯಭಾರಿ

ಮುಜರಾಯಿ ದೇಗುಲಗಳಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಯೋಜನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 9:49 IST
Last Updated 25 ಡಿಸೆಂಬರ್ 2019, 9:49 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: ‘ಮುಜರಾಯಿದೇಗುಲಗಳಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಯೋಜನೆಗೆ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಚಲನಚಿತ್ರ ನಟರಾದ ಪುನೀತ್ ರಾಜ್‍ ಕುಮಾರ್, ಯಶ್ ಹಾಗೂ ರಾಧಿಕಾ ದಂಪತಿ ರಾಯಭಾರಿಗಳಾಗಿದ್ದಾರೆ’ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಯೋಜನೆ ಜಾರಿಗೆ ಸಿದ್ಧತೆಯ ಬಗ್ಗೆನಗರದಲ್ಲಿಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ಅವರು ಸಭೆ ನಡೆಸಿದರು.

‘ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರು, ಮಠಾಧೀಶರು, ಗಣ್ಯರು ಕೂಡ ಈ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಹೆಚ್ಚಿನ ಆದಾಯವಿರುವ 16 ‘ಎ’ ದರ್ಜೆಯ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಮಾರಿಕಾಂಬಾ ದೇವಾಲಯ, ಹೊನ್ನಾವರ ತಾಲ್ಲೂಕಿನಇಡಗುಂಜಿ ವಿನಾಯಕ ದೇವಾಲಯ ಹಾಗೂ ಭಟ್ಕಳ ತಾಲ್ಲೂಕಿನಶಿರಾಲಿ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

‘ಸುವರ್ಣ ತ್ರಿಭುಜ’ ಮೇಲೆತ್ತಲುಪತ್ರ:ಮಹಾರಾಷ್ಟ್ರ ಭಾಗದ ಸಮುದ್ರದಲ್ಲಿ ಮುಳುಗಿರುವ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ದೋಣಿಯ ಅವಶೇಷವನ್ನು ಮೇಲೆತ್ತಲು ರಕ್ಷಣಾ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.

ಒಟ್ಟು ಏಳು ಮೀನುಗಾರರಿದ್ದ ದೋಣಿಯುಒಂದು ವರ್ಷದ ಹಿಂದೆಮುಳುಗಿತ್ತು. ದೋಣಿಯಲ್ಲಿದ್ದವರ ಸ್ಥಿತಿಗತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ. ದೋಣಿಯ ಅವಶೇಷವನ್ನು ಮೇಲೆತ್ತುವುದರಿಂದಸಂತ್ರಸ್ತರ ಕುಟುಂಬಗಳಿಗೆಒಂದು ರೀತಿಯ ಸಮಾಧಾನ ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.