ADVERTISEMENT

ಪಠ್ಯ ಪರಿಷ್ಕರಣೆ ಸಮಿತಿ ಸ್ವಾಯತ್ತ ಸಂಸ್ಥೆಯಾಗಲಿ:

​ಪ್ರಜಾವಾಣಿ ವಾರ್ತೆ
Published 27 ಮೇ 2022, 19:50 IST
Last Updated 27 ಮೇ 2022, 19:50 IST

ದಾವಣಗೆರೆ: ‘ಬಿಜೆಪಿ ಸರ್ಕಾರ ತನ್ನ ಕೇಸರೀಕರಣದ ಅಜೆಂಡಾದ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನೂ ಕೆಡಿಸಲು ಶುರುಮಾಡಿದೆ. ಸದ್ಯದ ಪಠ್ಯಪುಸ್ತಕ ಪುನರ್‌ರಚನೆ ಇಂಥ ಒಂದು ಧೂರ್ತ, ಅನೈತಿಕ ಹೆಜ್ಜೆಯಾಗಿದ್ದು, ಇದನ್ನು ಖಂಡಿಸುತ್ತೇವೆ. ಶಿಕ್ಷಣದ ಹೃದಯವಾಗಿರುವ ಪಠ್ಯಕ್ರಮ ರಚನೆಯನ್ನು ನಾಡಿನ‌ ಮಾನ್ಯತೆ ಪಡೆದ, ಅನುಭವಿ ತಜ್ಞರು ನಿರ್ವಹಿಸಬೇಕು ಮತ್ತು ಭವಿಷ್ಯದ ದೃಷ್ಟಿಯಿಂದ ಈ ಪ್ರಕ್ರಿಯೆಗೆ ಸ್ವಾಯತ್ತ ಸಾಂಸ್ಥಿಕ ಸ್ವರೂಪವನ್ನು ನೀಡಬೇಕು’ ಎಂಬ ನಿರ್ಣಯವನ್ನು ದಾವಣಗೆರೆಯಲ್ಲಿ ಶುಕ್ರವಾರ ಆರಂಭಗೊಂಡ 8ನೇ ಮೇ ಸಾಹಿತ್ಯ ಮೇಳದಲ್ಲಿ ತೆಗೆದುಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.