
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ನಾಡಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆಯಿತು.
ಸಮಾವೇಶ ಉದ್ಘಾಟನಾ ಸಮಾರಂಭದ ಆರಂಭದಲ್ಲಿ ನಾಡ ಗೀತೆಯ ಧ್ವನಿಮುದ್ರಣವನ್ನು ಪ್ಲೇ ಮಾಡಲಾಯಿತು. ನಾಲ್ಕೇ ಸಾಲುಗಳ ಗಾಯನವಾಗುತ್ತಿದ್ದಂತೆ ನಾಡ ಗೀತೆ ಮೊಟಕುಗೊಂಡಿತು.
ನಾಡ ಗೀತೆ ಅರ್ಧಕ್ಕೆ ಮೊಟಕುಗೊಂಡಿರುವುದನ್ನು ಕಂಡು ಸಭಾಂಗಣದಲ್ಲಿದ್ದವರು ಗಲಿಬಿಲಿಗೊಂಡರು. ನಾಡ ಗೀತೆಯನ್ನು ಬಿಟ್ಟು ಕಾರ್ಯಕ್ರಮ ಮುಂದುವರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.