ADVERTISEMENT

ಕರ್ನಾಟಕ ಪೊಲೀಸ್, ಸರ್ಕಾರಕ್ಕೆ ಜೈಕಾರ ಕೂಗಿದ ಕಾರ್ಮಿಕರು

ರೈಲಿನಲ್ಲಿ ಊರಿಗೆ ಹೊರಟ ಕಾರ್ಮಿಕರು 

​ಪ್ರಜಾವಾಣಿ ವಾರ್ತೆ
Published 3 ಮೇ 2020, 6:18 IST
Last Updated 3 ಮೇ 2020, 6:18 IST
ಬೆಂಗಳೂರಿನ ರೈಲು ನಿಲ್ದಾಣಗಳಿಂದ ಹೊರರಾಜ್ಯಗಳಿಗೆ ತೆರಳಿದ ಕಾರ್ಮಿಕರು
ಬೆಂಗಳೂರಿನ ರೈಲು ನಿಲ್ದಾಣಗಳಿಂದ ಹೊರರಾಜ್ಯಗಳಿಗೆ ತೆರಳಿದ ಕಾರ್ಮಿಕರು   

ಬೆಂಗಳೂರು: ಹೊರ ರಾಜ್ಯದ ಕಾರ್ಮಿಕರನ್ನು ಅವರ ಊರುಗಳಿಗೆಕಳುಹಿಸಲಾಗುತ್ತಿದೆ‌.ನಗರದಲ್ಲಿ ದುಡಿಯಲು ಬಂದು ಉಳಿದಿದ್ದ ಒಡಿಶಾದ ಕಾರ್ಮಿಕರನ್ನು ವಿಶೇಷ ರೈಲಿನಲ್ಲಿಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಭಾನುವಾರ ಬೆಳಿಗ್ಗೆ ಕಳುಹಿಸಲಾಯಿತು.

ನಗರದಿಂದ ಬಸ್‌ಗಳಲ್ಲಿ ಕಾರ್ಮಿಕರನ್ನು ನಿಲ್ದಾಣಕ್ಕೆ ಕರೆದೊಯ್ದಲಾಯಿತು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದ ತಂಡ ಹಾಗೂ ರೈಲು ಸಿಬ್ಬಂದಿ ಪ್ರತಿಯೊಬ್ಬ ಕಾರ್ಮಿಕರನ್ನು ಅಂತರ ಕಾಯ್ದುಕೊಂಡು ರೈಲು ಹತ್ತಿಸಿದರು.ರೈಲು ಹತ್ತಿದ ಕಾರ್ಮಿಕರು, ಕರ್ನಾಟಕ ಪೊಲೀಸ್ ಹಾಗೂ ಸರ್ಕಾರಕ್ಕೆ ಜೈಕಾರ್ ಕೂಗಿದರು.

ಡಿಸಿಪಿ ಗರಂ: ರೈಲ್ವೆ ಅಧಿಕಾರಿಗಳ ವರ್ತನೆಗೆ ಡಿಸಿಪಿ‌ ಶಶಿಕುಮಾರ್ ಗರಂ ಆದರು.ಒಂದೊಂದು ಭೋಗಿಗೆ 54 ಪ್ರಯಾಣಿಕರಿಗೆ ಮಾತ್ರ ಅವಕಾಶವಿತ್ತು. ಒಂದೊಂದೇ ಬೋಗಿಯಲ್ಲಿ ಕಾರ್ಮಿಕರನ್ನು ಹತ್ತಿಸುವಾಗ ರೈಲ್ವೆ ಅಧಿಕಾರಿಗಳು ತಡ ಮಾಡಿದರು. ಹೊರಗಡೆ ತುಂಬಾ ಪ್ರಯಾಣಿಕರು ನಿಂತಿದ್ದಾರೆ ಕಾಲ ಹರಣ ಮಾಡ ಬೇಡಿ ಎಂದು ಡಿಸಿಪಿ ತಾಕೀತು ಮಾಡಿದರು.

ADVERTISEMENT

ಟಿಕೆಟ್‌ಗೆ ಹಣ ಕೊಟ್ಟ ಪಿಎಸ್ಐ:ಭದ್ರತಾ ಸಿಬ್ಬಂದಿ ಪ್ರತಾಪ್ ಹಾಗೂ ಅವರ ಮಗಳು ಪೂಜಾ, ತಮ್ಮೂರಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದರು. ಆದರೆ, ಟಿಕೆಟ್ ಪಡೆಯಲು ದುಡ್ಡು ಇರಲಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಕರ್ತವ್ಯದಲ್ಲಿದ್ದ ಮಾರತ್ತಹಳ್ಳಿ ಪಿಎಸ್ಐ ಅನಿತಾ ಅವರೇ 1,600 ಕೊಟ್ಟು ಟಿಕೆಟ್ ತೆಗೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.