ಶಿವಮೊಗ್ಗ: ಶಾಲಾ, ಕಾಲೇಜುಗಳು ತಡವಾಗಿ ಆರಂಭವಾಗಿರುವ ಕಾರಣ ಈ ಬಾರಿ ಬೇಸಿಗೆ ರಜೆಯನ್ನೂ ಬಳಸಿಕೊಂಡು ಮೇ ವರೆಗೆ ತರಗತಿಗಳನ್ನು ನಡೆಸುವ ಇಂಗಿತವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ವ್ಯಕ್ತಪಡಿಸಿದರು.
ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಬುಧವಾರ ‘ಸ್ಮಾರ್ಟ್‌ಕ್ಲಾಸ್’ ವೀಕ್ಷಿಸಿದ ನಂತರ ಅವರು ಮಾತನಾಡಿದರು.
‘ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.ಈಗಾಗಲೇ ಸಾಕಷ್ಟು ರಜೆಗಳನ್ನು ಕಳೆದಿದ್ದೀರಿ. ಉಳಿದ ನಾಲ್ಕೂವರೆ ತಿಂಗಳು ಶಿಕ್ಷಕರು ಪಾಠದ ಕಡೆ, ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ಪಠ್ಯಕ್ರಮ ನಿಗದಿ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಒಂದೂವರೆ ತಿಂಗಳು ಸೇತುಬಂಧ ಶಿಕ್ಷಣಕ್ಕೆ ಮೀಸಲಿಡಲಾಗುವುದು. ಹಿಂದಿನ ವರ್ಷದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪುನರ್‌ಮನನ ಮಾಡಿಸಿದ ನಂತರ ಹೊಸ ಪಠ್ಯ ಕಲಿಕೆಗೆ ಸಿದ್ಧಗೊಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.