
ಪ್ರಜಾವಾಣಿ ವಿಶೇಷಕರ್ನಾಟಕ ಹುಲಿಗಳ ನಾಡೆಂಬ ಶ್ರೇಯಕ್ಕೆ ಮತ್ತೆ ಪಾತ್ರವಾಗುವತ್ತ ಅರಣ್ಯ ಇಲಾಖೆಯು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನೇತೃತ್ವದಲ್ಲಿ ದೇಶದಾದ್ಯಂತ ಹುಲಿ ಗಣತಿ ಆರಂಭವಾಗಿದ್ದು, ರಾಜ್ಯದ ಅರಣ್ಯ ಇಲಾಖೆಯ 9 ಸಾವಿರ ಸಿಬ್ಬಂದಿ ಹುಲಿಯ ಜಾಡು ಹಿಡಿದು ಕಾಡುಗಳಲ್ಲಿ ತಿರುಗಾಟ ನಡೆಸಿದ್ದಾರೆ. ನಿತ್ಯ ಐದು ಕಿ.ಮೀ ನಡಿಗೆ ಹುಲಿ ಹೆಜ್ಜೆ, ಮಲ, ಮರಗಳಲ್ಲಿ ದಾಖಲಿಸಿರುವ ಉಗುರಿನ ಗುರುತು ಸೇರಿದಂತೆ ಎಲ್ಲವನ್ನೂ ಲೆಕ್ಕ ಹಾಕುತ್ತಿದ್ದಾರೆ. ಜ.5ರಿಂದ ಆರಂಭವಾಗಿರುವ ಗಣತಿಯು ಮಾರ್ಚ್ ಮೊದಲವಾರದವರೆಗೂ ನಡೆಯಲಿದೆ. ಎಲ್ಲ ಜಿಲ್ಲೆಗಳ ಎಲ್ಲ ಕಾಡುಗಳೂ ಈ ಸಮೀಕ್ಷೆಯ ವ್ಯಾಪ್ತಿಗೆ ಒಳಪಡಲಿವೆ. ಕಳೆದ ಗಣತಿಯಲ್ಲಿ ತಪ್ಪಿಹೋದ ಪ್ರದೇಶಗಳೂ ಈ ಬಾರಿ ಸೇರ್ಪಡೆಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.