ADVERTISEMENT

ಫೋನಿ ಸಂತ್ರಸ್ತರಿಗೆ ಟೊಯೋಟಾ ಸಿಬ್ಬಂದಿ ನೆರವು

​ಪ್ರಜಾವಾಣಿ ವಾರ್ತೆ
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಆಹಾರ ಪೊಟ್ಟಣ ಸಿದ್ಧಪಡಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಸಂಸ್ಥೆಯ ಸಿಬ್ಬಂದಿ
ಆಹಾರ ಪೊಟ್ಟಣ ಸಿದ್ಧಪಡಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಸಂಸ್ಥೆಯ ಸಿಬ್ಬಂದಿ   

‘ಫೋನಿ’ ಚಂಡಮಾರುತದಿಂದ ತತ್ತರಿಸಿದ ಒಡಿಶಾದ ಸಂತ್ರಸ್ತರಿಗೆ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ (ಟಿಕೆಎಂ) ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ತುರ್ತು ಪರಿಹಾರ ಕಿಟ್‌ ರವಾನಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ಆಹಾರ ಪೊಟ್ಟಣ, 150 ಸೌರದೀಪಗಳನ್ನು ಒಡಿಶಾಕ್ಕೆ ಸಾಗಿಸಲಾಗಿದೆ. ಅಕ್ಕಿ, ಬೇಳೆ, ಸಕ್ಕರೆಯಂತಹ ದಿನಬಳಕೆ ವಸ್ತುಗಳ ಆಹಾರ ಪೊಟ್ಟಣಗಳು 32 ಸಾವಿರ ಜನರ ಹಸಿವು ತಣಿಸಲಿವೆ. ಈ ಸಂಸ್ಥೆಯ ಎರಡು ಸಾವಿರ ಉದ್ಯೋಗಿಗಳು ಸ್ವಯಂ ಪ್ರೇರಿತರಾಗಿ ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಟೊಯೋಟಾ ‘ಐ ಕೇರ್‌’ ಕಾರ್ಯ ಕ್ರಮದ ಯೋಜನೆ ಅಡಿಸಂಸ್ಥೆಯ ಸಿಬ್ಬಂದಿ ಸರ್ಕಾರಿ ಶಾಲೆ, ಆಟದ ಮೈದಾನಗಳ ಪುನರುಜ್ಜೀವನ, ಪರಿಸರ ಜಾಗೃತಿ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

‘ನಮ್ಮ ಸಣ್ಣ ನೆರವು ಒಡಿಶಾದ ಸಂತ್ರಸ್ತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದರೆ ನಮ್ಮ ಶ್ರಮ ಸಾರ್ಥಕ’ ಎಂದು ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಎನ್‌. ರಾಜಾ ಹೇಳಿದರು. ‘ಉತ್ತಮವಾದ ಕಾರುಗಳನ್ನು ತಯಾರಿಸುವುದು ಮಾತ್ರ ನಮ್ಮ ಉದ್ದೇಶವಲ್ಲ. ಸಮುದಾಯಗಳ ಜೀವನವನ್ನು ಸಮೃದ್ಧಿಗೊಳಿಸುವುದು ಕೂಡ ನಮ್ಮ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.