ADVERTISEMENT

Video | ದೇವನಹಳ್ಳಿ: ಬೆಂಗಳೂರಿನ ಆಹಾರ ಬಟ್ಟಲಿಗೆ ಕುತ್ತು!

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 2:40 IST
Last Updated 14 ಜೂನ್ 2022, 2:40 IST

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ 1,777 ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ರಾಜ್ಯಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ರೈತರು ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಜಮೀನು ಸ್ವಾಧೀನಪಡಿಸಿಕೊಂಡಲ್ಲಿ, ಈ ಹೋಬಳಿಯ 1,800ಕ್ಕೂ ಹೆಚ್ಚು ಹಿಡುವಳಿದಾರರು ಭೂರಹಿತರಾಗಲಿದ್ದಾರೆ. ತರಕಾರಿ, ಹೂವು, ಹಣ್ಣಿಗಾಗಿ ಬೆಂಗಳೂರು ಮಹಾನಗರವು ಹೆಚ್ಚು ಅವಲಂಬಿಸಿರುವುದು ಇದೇ ದೇವನಹಳ್ಳಿ ತಾಲ್ಲೂಕನ್ನು. ಸಂಪದ್ಭರಿತ ಕೃಷಿ ಜಮೀನು ಕೈಗಾರಿಕೆ ಹೆಸರಿನಲ್ಲಿ ನಾಶವಾದರೆ, ಬೆಂಗಳೂರಿನ ಆಹಾರದ ಬಟ್ಟಲಿಗೇ ಕುತ್ತು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT