ADVERTISEMENT

ಜೆಡಿಎಸ್ ಬೆಂಬಲದೊಂದಿಗೆ ರಾಜ್ಯಪಾಲರ ಭೇಟಿ ಮಾಡ್ತೇವೆ: ಗೃಹ ಸಚಿವ ಬೊಮ್ಮಾಯಿ

ವಿಧಾನ ಪರಿಷತ್ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 8:48 IST
Last Updated 15 ಡಿಸೆಂಬರ್ 2020, 8:48 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನವರು ಮಾಡಿರುವುದು ಕಾನೂನುಬಾಹಿರ. ಸಭಾಪತಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಈಗ ನಾವು ರಾಜ್ಯಪಾಲರನ್ನ ಭೇಟಿ ಮಾಡುತ್ತೇವೆ. ಜೆಡಿಎಸ್ ಬೆಂಬಲದ ಪತ್ರ ತೆಗೆದುಕೊಂಡು ಹೋಗುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ವಿಧಾನ ಪರಿಷತ್ತಿನಲ್ಲಿ ನಡೆದ ಬೆಳವಣಿಗೆ ಮತ್ತು ಮುಂದಿನ ನಡೆಯ ಬಗ್ಗೆ ರಾಜ್ಯಪಾಲರು ಸ್ವತಃ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದೂ ಹೇಳಿದರು.

‘ಸರ್ಕಾರದ ನಿರ್ದೇಶನದಂತೆ ಸಭೆ ಕರೆದಿದ್ದೇನೆ ಎಂದು ಸಭಾಪತಿ ಹೇಳಿದ್ದರು. ಈಗ ಕಾರ್ಯದರ್ಶಿ ಹೇಳಿದಂತೆ ಸಭೆ ಕರೆದಿದ್ದಾರೆ. ಇದು ನ್ಯಾಯಸಮ್ಮತವಲ್ಲ. ಅದಕ್ಕೆ ಉಪಸಭಾಪತಿಯವರನ್ನು ಪೀಠದಲ್ಲಿ‌ ಕೂರಿಸಿದ್ದೆವು. ಈಗ 14 ಜೆಡಿಎಸ್ ಸದಸ್ಯರು ಅವಿಶ್ವಾಸದ ಪತ್ರಕ್ಕೆ ಸಹಿ ಹಾಕಿದ್ದೇವೆ. ಪರಿಷತ್ ಅನಿರ್ದಿಷ್ಟಾವದಿಗೆ ಮುಂದೂಡಿರಬಹುದು. ಆದರೆ, ಈಗ ನೈತಿಕವಾಗಿ ಸಭಾಪತಿ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಂದೆ ಮತ್ತೊಂದು ಸಭೆ ಕರೆದು ನಿರ್ಧರಿಸಬೇಕು ಎಂದೂ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೇಳಿದರು.

ADVERTISEMENT

‘ಹಿಂದೆ ಶಂಕರ ಮೂರ್ತಿಯವರು ಪೀಠ ಬಿಟ್ಟು ಕೆಳಗೆ ಕುಳಿತಿದ್ದರು. ಆದರೆ, ಇವರುಪೀಠದ ಮೇಲೆ ಕುಳಿತಿದ್ದಾರೆ’ ಎಂದೂ ಹೊರಟ್ಟಿ ಹೇಳಿದರು.

‘ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಾಗ ಈ ರೀತಿ ಮಾಡಿದೆ. ವಿಧಾನಪರಿಷತ್‌ನಲ್ಲೂ ಅದನ್ನೇ ಮಾಡಿದೆ. ಪೀಠಕ್ಕೆ ಅವಮಾನ ಮಾಡಿದೆ. ಗೂಂಡಾ ಸಂಸ್ಕೃತಿ ಕಾಂಗ್ರೆಸ್ ಗೆ ಹೊಸದಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

‘ಜೆಡಿಎಸ್ ನವರು ಲಿಖಿತವಾಗಿ ಸಭಾಪತಿ ಮೇಲೆ ಅವಿಶ್ವಾಸಕ್ಕೆ ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಬಣ್ಣ ಬಯಲಾಗಿದೆ. ಆದರೂಪೀಠದಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಕುಳಿತುಕೊಳ್ಳುವುದು ತಪ್ಪಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.