ಬೆಂಗಳೂರು: ‘ಇನ್‌ಸೈಟ್ ಐಎಎಸ್’ ಅಕಾಡೆಮಿಯಲ್ಲಿ ತರಬೇತಿ ಪಡೆದ ದೇಶದ 220 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ.
ಅರ್ಹತೆ ಪಡೆದ ಕರ್ನಾಟಕದ ಅಭ್ಯರ್ಥಿಗಳಲ್ಲಿ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಇನ್‌ಸೈಟ್ ಐಎಎಸ್ ವಿದ್ಯಾರ್ಥಿಗಳು. 100ರ ಒಳಗಿನ ಸ್ಥಾನ ಪಡೆದ ರಂಗಮಂಜು, ಡಾ.ಸಚಿನ್, ಬಸವರಾಜ ಗುತ್ತೂರ್, ಅನುಪ್ರಿಯ ಸಕ್ಯಾ ಅವರು ಇನ್‌ಸೈಟ್ ಸಂಸ್ಥಾಪಕ ವಿನಯ್‌ಕುಮಾರ್ ಜಿ.ಬಿ. ಅವರ ಮಾರ್ಗದರ್ಶನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ.
ನಿಗದಿತ ವೇಳಾಪಟ್ಟಿ, ಶಿಸ್ತುಬದ್ಧ ತರಗತಿಗಳು, ಗುಣಮಟ್ಟದ ಮಾರ್ಗದರ್ಶನ, ಉತ್ತರ ಬರೆಯುವ ಕೌಶಲ ವೃದ್ಧಿ ಇನ್‌ಸೈಟ್ ವೈಶಿಷ್ಟ್ಯ. ‘ಇಂಟಿಗ್ರೇಟೆಡ್ ಕೋಚಿಂಗ್’ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. 2028ರ ವೇಳೆಗೆ ಕರ್ನಾಟಕದಿಂದ ಪ್ರತಿ ವರ್ಷ ಕನಿಷ್ಠ 100 ಅಭ್ಯರ್ಥಿಗಳನ್ನು ಐಎಎಸ್, ಐಪಿಎಸ್‌ಗೆ ಕೊಡುಗೆ ನೀಡುವ ಗುರಿ ಹೊಂದಿದೆ. ಹಾಗಾಗಿ, ಅಧಿಕ ಅಭ್ಯರ್ಥಿಗಳು ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ವಿನಯ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.