ADVERTISEMENT

Video Story: ಪಾಲಿಸ್ಟರ್‌ ಬಾವುಟಕ್ಕೆ ಅವಕಾಶ- ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 16:01 IST
Last Updated 31 ಜುಲೈ 2022, 16:01 IST

ಕೇಂದ್ರ ಸರ್ಕಾರ 2002ರ ಧ್ವಜ ಸಂಹಿತೆಗೆ ತಂದಿರುವ ಹೊಸ ತಿದ್ದುಪಡಿಯ ಪ್ರಕಾರ, ಪಾಲಿಸ್ಟರ್‌ ಧ್ವಜಗಳನ್ನೂ ಬಳಸಬಹುದಾಗಿದೆ. ಅಲ್ಲದೆ, ಯಂತ್ರಗಳ ಮೂಲಕ ತಯಾರಿಸಲಾದ ತ್ರಿವರ್ಣ ಧ್ವಜಗಳನ್ನೂ ಬಳಸಬಹುದು. ಈ ಮೊದಲು, ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶವಿರಲಿಲ್ಲ ಮತ್ತು ಕೈಯಿಂದ ನೇಯ್ದ ಬಾವುಟಗಳನ್ನು ಮಾತ್ರ ಬಳಸಬೇಕಿತ್ತು. 2021ರ ಡಿಸೆಂಬರ್‌ 30ರಂದು ತಂದಿರುವ ಈ ತಿದ್ದುಪಡಿಯಿಂದ, ಸುದೀರ್ಘ ಕಾಲ, ಖಾದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲಿಯೂ, ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಸಿಬ್ಬಂದಿ ಆಘಾತದಲ್ಲಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT