ADVERTISEMENT

PHOTOS | ಹೊಸಪೇಟೆ: ಪುನೀತ್‌ ರಾಜಕುಮಾರ್‌ ಪುತ್ಥಳಿ ಸ್ಥಾಪನೆ

ಹೊಸಪೇಟೆ (ವಿಜಯನಗರ): ಹೊಸಪೇಟೆ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ ಹೊಂದಿದ್ದ ನಟ ದಿವಂಗತ ಪುನೀತ್‌ ರಾಜಕುಮಾರ್‌ ಬಗ್ಗೆಯೂ ಸ್ಥಳೀಯರು ಅಷ್ಟೇ ಮಮತೆ ಹೊಂದಿದ್ದಾರೆ. ಅದರ ದ್ಯೋತಕವಾಗಿ ಅವರ ಸವಿನೆನಪಿನಲ್ಲಿ ಅವರ ಕಂಚಿನ ಪುತ್ಥಳಿಯನ್ನು ನಗರದ ಹೃದಯಭಾಗದಲ್ಲಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾರೆ.

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 15:58 IST
Last Updated 4 ಜೂನ್ 2022, 15:58 IST
ಪುತ್ಥಳಿ ಅನಾವರಣ ಸಮಾರಂಭ ಭಾನುವಾರ ಸಂಜೆ 5ಕ್ಕೆ ನಗರದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜರುಗಲಿದೆ.
ಪುತ್ಥಳಿ ಅನಾವರಣ ಸಮಾರಂಭ ಭಾನುವಾರ ಸಂಜೆ 5ಕ್ಕೆ ನಗರದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜರುಗಲಿದೆ.    
ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ಪತ್ನಿ ಅಶ್ವಿನಿ ಅವರು ಪುತ್ಥಳಿ ಅನಾವರಣಗೊಳಿಸುವರು.
ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆಯನ್ನು ನಿರ್ಮಿಸಲಾಗಿದ್ದು, ಗುರುಕಿರಣ್‌ ಸಂಗೀತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪುನೀತ್ ಅಭಿಮಾನಿ ಬಳಗದವರು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಆಂಧ್ರ ಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.