ADVERTISEMENT

‘ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಿ’

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಸವಾಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 17:43 IST
Last Updated 18 ಏಪ್ರಿಲ್ 2019, 17:43 IST
ವಿನಯ ಕುಲಕರ್ಣಿ
ವಿನಯ ಕುಲಕರ್ಣಿ   

ಹುಬ್ಬಳ್ಳಿ: ‘ವೋಟಿಗಾಗಿ ಬಿಜೆಪಿ ಮುಖಂಡರು ಬಸವಣ್ಣನ ಹೆಸರು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ತಾಕತ್ತಿದ್ದರೆ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಲಿ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ರಾಜ್ಯದಿಂದ 9 ಮಂದಿ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರು. ಆದರೆ, ಬಿಜೆಪಿಯು ಯಾರೊಬ್ಬನ್ನೂ ಸಚಿವರನ್ನಾಗಿ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ ಸಮಾಜದಿಂದ ಆಯ್ಕೆಯಾಗಿದ್ದ ಮೂವರ ಪೈಕಿ ಅನಂತಕುಮಾರ ಹೆಗಡೆ ಮತ್ತು ಅನಂತಕುಮಾರ್‌ ಸಚಿವರಾದರೆ, ಪ್ರಹ್ಲಾದ ಜೋಶಿ ಅವರು ಒಎನ್‌ಜಿಸಿಗೆ ಅಧ್ಯಕ್ಷರಾದರು. ಈ ಮೂಲಕ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದರು.

ADVERTISEMENT

‘ಟಿವಿ, ಪತ್ರಿಕೆ ನೋಡಿ ವೋಟ್‌ ಹಾಕಬೇಡಿ. ಮಾಧ್ಯಮಗಳಲ್ಲಿ ಶೇ 70ರಷ್ಟು ಅದಾನಿ, ಅಂಬಾನಿ ಷೇರು ಹೂಡಿಕೆ ಮಾಡಿದ್ದಾರೆ. ಈ ಮಾಧ್ಯಮಗಳಲ್ಲಿ ಮೋದಿ, ಬಿಜೆಪಿ ಸುದ್ದಿಗಳೇ ಬರುತ್ತವೆ’ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.