
ಬೆಂಗಳೂರು:ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ‘ವಿಶ್ವಕರ್ಮ ಯಜ್ಞಮಹೋತ್ಸವ’ ಮಲ್ಲೇಶ್ವರದಲ್ಲಿ ಭಾನುವಾರ ನಡೆಸಿತು.
ಮಹೋತ್ಸವದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಹವಾಚನ, ವಿಶ್ವಕರ್ಮ ಪೂಜೆ, ಯಜ್ಞ ಪೂರ್ಣಾಹುತಿ ಆಚರಣೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಉತ್ತರ ಕರ್ನಾಟಕದಲ್ಲಿ ಬರಗಾಲ ತಲೆದೋರಿರುವ ಕಾರಣ ವಿಶ್ವಕರ್ಮ ಸಮುದಾಯವು ಪ್ರತಿವರ್ಷ ನಡೆಸುತ್ತಿದ್ದ ‘ರಾಜ್ಯ ಮಟ್ಟದ ಸಮಾವೇಶ’ವನ್ನು ಈ ಬಾರಿ ನಡೆಸಿಲ್ಲ.
ಅದರ ಬದಲಾಗಿ ಸರಳ ಯಜ್ಞಾಚರಣೆ ಮಾಡಿ ‘ಪ್ರವಾಹ ಮತ್ತು ಬರಗಾಲದಿಂದ ಸಂಕಷ್ಟಕ್ಕೆ ಇಡಾದ ಜನರ ಸ್ಥಿತಿ ಸುಧಾರಿಸಲಿ’ ಎಂದು ಸಮುದಾಯದ ಜನರು ಪ್ರಾರ್ಥಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ,‘ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರ ಸಂಖ್ಯೆ 40 ಲಕ್ಷದಷ್ಟಿದೆ. ವಾಸ್ತುಶಿಲ್ಪಕ್ಕೆ ಈ ಸಮುದಾಯದವರ ಕೊಡುಗೆ ಹೆಚ್ಚಿದೆ’ ಎಂದರು.
‘ಸಮಾವೇಶಕ್ಕೆ ದುಬಾರಿ ವೆಚ್ಚ ಮಾಡುವ ಬದಲಿ ಲೋಕ ಕಲ್ಯಾಣಾರ್ಥ ಸರಳವಾಗಿ ಯಜ್ಞ ಆಯೋಜಿಸಿರುವುದು ಸಮಯೋಚಿತ’ ಎಂದು ಶ್ಲಾಘಿಸಿದರು.
ನಾವು ಸಮುದಾಯಕ್ಕೆ ಸೀಮಿತವಲ್ಲ. ನಾಡಿನ ಜನರ ಕಷ್ಟದಲ್ಲಿ ನಾವೂ ಭಾಗಿದಾರರು ಎಂಬ ಸಂದೇಶ, ಈ ಯಜ್ಞ ಮಹೋತ್ಸವದಿಂದ ನೀಡಿದ್ದೇವೆ.
–ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.