ADVERTISEMENT

ಸ್ಪೀಕರ್‌ ಸ್ಥಾನಕ್ಕೆ ಕಾಗೇರಿ ನಾಮಪತ್ರ: ಆಯ್ಕೆ ಖಚಿತ, ಘೋಷಣೆಯೊಂದೇ ಬಾಕಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 7:18 IST
Last Updated 30 ಜುಲೈ 2019, 7:18 IST
   

ಬೆಂಗಳೂರು:ಕೆ.ಆರ್‌ರಮೇಶ್‌ ಕುಮಾರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭೆ ಸಭಾಪತಿಸ್ಥಾನಕ್ಕೆ ಶಿರಸಿಯ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳವಾರ ಬೆಳಗ್ಗೆ 11.30ರ ಸುಮಾರಿನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ಕಾಗೇರಿ ಅವರೊಂದಿಗಿದ್ದರು.

ಸಭಾಪತಿ ಸ್ಥಾನಕ್ಕೆ ಕಾಗೇರಿ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರಆಯ್ಕೆ ಖಚಿತವಾಗಿದ್ದು,ಬುಧವಾರ ಅಧಿಕೃತವಾಗಿಘೋಷಣೆ ಮಾಡಲಾಗುತ್ತದೆ.

ಮಾಜಿ ಸ್ಪೀಕರ್‌ ಬೋಪಯ್ಯ ಅವರನ್ನೇ ಈ ಬಾರಿಯೂ ಸ್ಪೀಕರ್‌ ಮಾಡಲು ಬಿಜೆಪಿ ಉದ್ದೇಶಿಸಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ, ಅಂತಿಮವಾಗಿ ಕಾಗೇರಿ ಅವರನ್ನು ಬಿಜೆಪಿ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಿಎಂ ಯಡಿಯೂರಪ್ಪ, ಶಾಸಕರಾದ ಈಶ್ವರಪ್ಪ, ಆಶೋಕ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.