ADVERTISEMENT

ಮತದಾನಕ್ಕೆ ಅವಕಾಶ ನೀಡದ ಕಂಪನಿ ಅಧಿಕಾರಿ ವಿರುದ್ಧ ಪೊಲೀಸ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 15:12 IST
Last Updated 5 ಡಿಸೆಂಬರ್ 2019, 15:12 IST

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಜಿಗಣಿಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರ ಅಧಿಕಾರಿ ತನ್ನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮತದಾನ ಮಾಡದಂತೆ ತಡೆಹಿಡಿದ ಪ್ರಸಂಗ ನಡೆದಿದೆ.

ಮತದಾನ ಮಾಡುವುದಕ್ಕೆ ಕಂಪನಿಯ ವತಿಯಿಂದ ಅವಕಾಶ ನೀಡಿದ್ದರೂ, ಆಂಧ್ರ ಮೂಲದ ಅಧಿಕಾರಿ ತನ್ನ ಸಿಬ್ಬಂದಿ ಮತದಾನ ಮಾಡದಿರುವಂತೆ ತಡೆ ಹಿಡಿದರು. ಮತ ಚಲಾಯಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರೂ, ಬೆಳಿಗ್ಗೆ 8.15ಕ್ಕೇ ಕೆಲಸಕ್ಕೆ ಬರಬೇಕು ಎಂದು ತಾಕೀತು ಮಾಡಿದ್ದರು.

ಕೆ.ಆರ್.ಪುರ ಕ್ಷೇತ್ರ ವ್ಯಾಪ್ತಿಯ ಮತದಾರರಾದ ಈ ಮಹಿಳೆತಮ್ಮಹಕ್ಕು ಚಲಾವಣೆಗೆ ಅವಕಾಶ ಸಿಗಲಿಲ್ಲ ಎಂದು ಆರೋಪಿಸಿ ಹೆಬ್ಬಗೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದರು ಹಾಗೂ ಕಂಪನಿಯ ಮಾನವ ಸಂಪನ್ಮೂಲ (ಎಚ್‌ಆರ್‌) ವಿಭಾಗಕ್ಕೂ ದೂರು ನೀಡಿದರು. ಕೊನೆಗೆ ಎಚ್‌ಆರ್ ವಿಭಾಗದ ಸೂಚನೆಯಂತೆ ಅವರಿಗೆ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.