ವಿಧಾನಸೌಧ
ಪ್ರಜಾವಾಣಿ ಚಿತ್ರಗಳು: ಎಂ. ಎಸ್. ಮಂಜುನಾಥ್
ಮೈಸೂರು: ‘ಸಂಘದ ಗಣವೇಷದಲ್ಲಿ ವಿಧಾನಸೌಧಕ್ಕೆ ಬರುತ್ತೇವೆ, ಏನು ಮಾಡುತ್ತೀರಾ? ಮನೆ ಮನೆಯಲ್ಲಿ ಆರ್‌ಎಸ್‌ಎಸ್ ಶಾಖೆ ಮಾಡುತ್ತೇವೆ’ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಹಾಗೂ ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿರುವುದು ಮೂರ್ಖತನದ ಪರಮಾವಧಿ’ ಎಂದು ದೂರಿದರು.
‘ಪ್ರಿಯಾಂಕ್ ಆರ್‌ಎಸ್‌ಎಸ್ ಶಾಖೆಗೆ ಬಂದು ಒಂದು ತಾಸು ಕೂರಲಿ. ಆಗ ಅವರಿಗೆ ಸಂಘದ ಚಟುವಟಿಕೆ ಗೊತ್ತಾಗುತ್ತದೆ’ ಎಂದರು.
‘ಆರ್‌ಎಸ್ಎಸ್ ಎಂದರೆ ಅವರಿಗೆ ಯಾಕಿಷ್ಟು ಅಲರ್ಜಿ? ಯಾರ ಕೈಯಲ್ಲೂ ಸಂಘದ ಚಟುವಟಿಕೆ ನಿಲ್ಲಿಸಲು ಸಾಧ್ಯವಿಲ್ಲ. ನೀವು ಈಗ ಏನೇನು ಮಾಡುತ್ತಿದ್ದೀರೋ ಅದಕ್ಕಿಂತ ಅಪ್ಪನಷ್ಟನ್ನು ನಾವು ಅಧಿಕಾರಕ್ಕೆ ಬಂದಾಗ ಮಾಡುತ್ತೇವೆ, ನೋಡುತ್ತಿರಿ’ ಎಂದು ಹೇಳಿದರು.
‘ಹಿಂದುತ್ವದ ಬಗ್ಗೆ ಮಾತಾಡುವುದು ಬ್ರೇನ್ ವಾಶಾ, ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ನಾವು ಜನರಿಗೆ ಹೇಳುವುದು ಬೇಡವಾ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.