ADVERTISEMENT

ರಾಜ್ಯದಲ್ಲಿ ದಿಢೀರ್ ತಾಪಮಾನ ಕುಸಿತ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:46 IST
Last Updated 9 ಜನವರಿ 2023, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ದಿಢೀರ್ ಆಗಿ ತಾಪಮಾನ ಕುಸಿದಿದ್ದು, ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಅನುಭವ ಉಂಟಾಗುತ್ತಿದೆ.

‘ಮುಂದಿನ 48 ಗಂಟೆಯಲ್ಲಿ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಆಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೋಮವಾರ ರಾಜಧಾನಿ ಬೆಂಗ ಳೂರಿನಲ್ಲೂ ತಾಪಮಾನ ಕುಸಿದಿತ್ತು. ಹೊರವಲಯದ ಜನರಿಗೆ ಚಳಿಯ ತೀವ್ರತೆ ಹೆಚ್ಚೇ ಇತ್ತು. ಮಲೆನಾಡು ಜಿಲ್ಲೆ ಗಳಾದ ಚಿಕ್ಕಮಗಳೂರು, ಕೊಡಗಿನಲ್ಲೂ ತಾಪಮಾನ ಇಳಿಕೆಯಾಗಿದೆ.

ADVERTISEMENT

ಮಂಗಳವಾರ ಬೆಳಗಾವಿ ಹಾಗೂ ಕಲಬುರಗಿಯಲ್ಲಿ 10, ಚಿತ್ರದುರ್ಗದಲ್ಲಿ 12, ಗದಗ ಜಿಲ್ಲೆಯಲ್ಲಿ ಕನಿಷ್ಠ 11 ಡಿಗ್ರಿ ಸೆ. ಉಷ್ಣಾಂಶ ದಾಖಲಾಗುವ ಸಾಧ್ಯತೆ ಯಿದೆ. ಈ ಜಿಲ್ಲೆಗಳಲ್ಲಿ ಮುಂಜಾನೆ ಹಾಗೂ ರಾತ್ರಿ ಚಳಿ ತೀವ್ರವಾಗಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ.

ಬೀದರ್: ಕನಿಷ್ಠ ಉಷ್ಣಾಂಶ
ಬೀದರ್:
ಜಿಲ್ಲೆಯಲ್ಲಿ ಹತ್ತು ದಿನಗಳಿಂದ 12 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ಉಷ್ಣಾಂಶ ಭಾನು ವಾರ 5.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು, 2015ರ ನಂತರದ ದಾಖಲೆ ಮುರಿಯಿತು.

2022ರಲ್ಲಿ 5.7 ಡಿಗ್ರಿ ಸೆಲ್ಸಿಯಸ್‌, 2021ರಲ್ಲಿ 8.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಠಾಂಶ ದಾಖಲಾಗಿತ್ತು. 2015ರ ಜ. 10 ರಂದು ಬೀದರ್‌ನ ಹಳ್ಳದ
ಕೇರಿಯಲ್ಲಿ 5.8 ಡಿಗ್ರಿ ಸೆಲ್ಸಿಯಸ್ ಮತ್ತು 2017ರಲ್ಲಿ ಹಲಬರ್ಗಾದಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

‘ಜ. 25ರವರೆಗೂ ಜಿಲ್ಲೆ ಯಲ್ಲಿ ಕನಿಷ್ಠ ಉಷ್ಠಾಂಶ 12 ರಿಂದ 14 ಡಿಗ್ರಿ ಸೆಲ್ಸಿಯಸ್‌ ಇರ ಲಿದೆ. ಫೆ. 10ರ ವರೆಗೆ ಚಳಿ ಮುಂದುವರಿಯಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.