ADVERTISEMENT

ಹಿಜಾಬ್ ಪ್ರಕರಣವನ್ನು ಈ ವಾರವೇ ವಿಲೇವಾರಿ ಮಾಡಲು ಇಚ್ಛಿಸಿದ್ದೇವೆ: ಹೈಕೋರ್ಟ್‌

ಪಿಟಿಐ
Published 22 ಫೆಬ್ರುವರಿ 2022, 12:56 IST
Last Updated 22 ಫೆಬ್ರುವರಿ 2022, 12:56 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ಹಿಜಾಬ್ ಸಂಬಂಧಿತ ಪ್ರಕರಣವನ್ನು ಈ ವಾರವೇ ವಿಲೇವಾರಿ ಮಾಡಲು ಬಯಸಿರುವುದಾಗಿ ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ. ಇದಕ್ಕಾಗಿ ಎಲ್ಲರ ಸಹಕಾರವನ್ನು ಕೋರಿದೆ.

ನ್ಯಾಯಾಲಯದ ವಿಚಾರಣೆ ಪ್ರಾರಂಭವಾಗುತ್ತಲೇ, ಅರ್ಜಿದಾರರಾದ ಬಾಲಕಿಯರ ಪರ ವಕೀಲರು ವಾದ ಆರಂಭಿಸಿದರು. ‘ಹಿಜಾಬ್‌ ಧರಿಸಿ ಶಾಲೆ, ಕಾಲೇಜಿಗೆ ಹಾಜರಾಗಲು ಕೋರಿರುವ ವಿದ್ಯಾರ್ಥಿನಿಯರಿಗೆ ಕೋರ್ಟ್‌ನ ಆದೇಶದಲ್ಲಿ ಸ್ವಲ್ಪ ಸಡಿಲಿಕೆ ನೀಡಬೇಕು’ ಎಂದು ವಕೀಲರು ಪೂರ್ಣ ಪೀಠಕ್ಕೆ ಮನವಿ ಮಾಡಿದರು.

‘ಈ ಪ್ರಕರಣವನ್ನು ಈ ವಾರವೇ ಮುಗಿಸಲು ಪೀಠ ಬಯಸುತ್ತದೆ. ಈ ವಾರದ ಅಂತ್ಯದೊಳಗೆ ಈ ಪ್ರಕರಣವನ್ನು ಮುಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾ. ಜೆ. ಎಂ. ಖಾಜಿ ಮತ್ತು ನ್ಯಾ. ಕೃಷ್ಣ ಎಂ ದೀಕ್ಷಿತ್ ಅವರ ಪೂರ್ಣ ಪೀಠವು ಹಿಜಾಬ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.