ADVERTISEMENT

ಅನಪುರದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಸಾವು; 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಗುರುಮಠಕಲ್ ತಾಲ್ಲೂಕಿನ ಅನಪುರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 10:12 IST
Last Updated 16 ಫೆಬ್ರುವರಿ 2023, 10:12 IST
ಸಾವಿತ್ರಮ್ಮ ವೆಂಕಟಪ್ಪ ನಕ್ಕ, ಸಾಯಮ್ಮ ಭೀಮಶಪ್ಪ ಮಿನಾಸ ಪುರಂ
ಸಾವಿತ್ರಮ್ಮ ವೆಂಕಟಪ್ಪ ನಕ್ಕ, ಸಾಯಮ್ಮ ಭೀಮಶಪ್ಪ ಮಿನಾಸ ಪುರಂ   

ಯಾದಗಿರಿ/ಗುರುಮಠಕಲ್: ಗುರುಮಠಕಲ್ ತಾಲ್ಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಬುಧವಾರ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.

ಸಾವಿತ್ರಮ್ಮ ವೆಂಕಟಪ್ಪ ನಕ್ಕ (35), ಸಾಯಮ್ಮ ಭೀಮಶಪ್ಪ ಮಿನಾಸ ಪುರಂ (72) ಮೃತರು. ‘ಅಸ್ವಸ್ಥರನ್ನು ತೆಲಂಗಾಣದ ನಾರಾಯಣಪೇಟೆ ಆಸ್ಪತ್ರೆ, ಮೆಹಬೂಬ್ ನಗರದ ಆಸ್ಪತ್ರೆ ಮತ್ತು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸ ಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

‘ಇಬ್ಬರು ಮಹಿಳೆಯರು ಸಾವಿಗೆ ಮತ್ತು ಜನರು ಅಸ್ವಸ್ಥಗೊಳ್ಳಲು ಕಲುಷಿತ ನೀರು ಕುಡಿದಿದ್ದೇ ಕಾರಣ ಎಂಬ ಶಂಕೆಯಿದೆ. ಗ್ರಾಮದ ಕರೆಮ್ಮ ದೇವಸ್ಥಾನ, ಚೌಡಕಟ್ಟಿ ಓಣಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಸೋರಿಕೆಯಿಂದ ನೀರು ಕಲುಷಿತ ಆಗಿರಬಹುದು. ಗ್ರಾಮದ ನೀರಿನ ಟ್ಯಾಂಕ್, ಕೊಳವೆಬಾವಿಯ ನೀರಿನ ಗುಣಮಟ್ಟ ಪರಿಶೀಲಿಸಲು ಅದನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಗುರುರಾಜ ಹಿರೇಗೌಡರ್ ತಿಳಿಸಿದರು.

ADVERTISEMENT

‘ಜನರ ಚಿಕಿತ್ಸೆಗೆಂದು ಆರೋಗ್ಯ ಇಲಾಖೆಯಿಂದ ಮೂರು ತಂಡ ರಚಿಸಲಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಒಳಗೊಂಡ ತಂಡವು ಗ್ರಾಮದಲ್ಲಿ ಬೀಡುಬಿಟ್ಟಿದೆ. ಕುಡಿಯಲು ಯೋಗ್ಯವಲ್ಲದ ನೀರಿನ ಪೂರೈಕೆ ತಕ್ಷಣವೇ ಸ್ಥಗಿತಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ’ ಎಂದರು.

**

ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಇಬ್ಬರು ಮಹಿಳೆಯರು ಸಾಯಲು ಮತ್ತು ಜನ ಅಸ್ವಸ್ಥಗೊಳ್ಳಲು ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ.
ಸ್ನೇಹಲ್‌ ಆರ್., ಜಿಲ್ಲಾಧಿಕಾರಿ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.