ADVERTISEMENT

ಕೊರೊನಾ ತಡೆಗೆ ಯುವ ‘ಕಾವಲು’ ಪಡೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 19:36 IST
Last Updated 5 ಜುಲೈ 2020, 19:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಂಸಭಾವಿ: ಇಲ್ಲಿಗೆ ಸಮೀಪದ ಚಿನ್ನಮುಳಗುಂದ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಗೆ ಗ್ರಾಮಸ್ಥರು ಕಾವಲು ಕಾಯುವ ಪದ್ಧತಿಗೆ ಮೊರೆ ಹೋಗಿದ್ದಾರೆ.

‘ಕೊರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ನಿರ್ಲಕ್ಷ್ಯ ತೋರಿದರೆ ಸಾವಿನ ಸಂಖ್ಯೆ ಉಲ್ಬಣವಾಗುತ್ತದೆ. ಗ್ರಾಮದ ಹಿರಿಯರೆಲ್ಲ ಸೇರಿ ತೀರ್ಮಾನಿಸಿ, ಈ ಕ್ರಮಕೈಗೊಂಡಿದ್ದೇವೆ. ಅಗತ್ಯವಿದ್ದವರಿಗೆ ಮಾತ್ರ ಪ್ರವೇಶ’ ಎಂದು ಗ್ರಾಮದ ಮುಖಂಡ ಮಾಲತೇಶ ಪೂಜಾರ ಮಾಹಿತಿ ನೀಡಿದರು.

‘ಜುಲೈ 1ರಿಂದ ಗಡಿ ಕಾಯಲು 40 ಜನರನ್ನು ನೇಮಿಸಿದ್ದೇವೆ. 4 ಸಾವಿರ ಜನಸಂಖ್ಯೆ ಇರುವ ನಮ್ಮೂರಿಗೆ ಸಂಪರ್ಕ ಕಲ್ಪಿಸುವ 6 ರಸ್ತೆಗಳಿವೆ. ಬೆಳಿಗ್ಗೆ 6 ಗಂಟೆಯಿಂದ 1 ಗಂಟೆಯವರೆಗೆ; 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾವಲು ಕಾಯಲು ಸ್ವಯಂಪ್ರೇರಣೆಯಿಂದ ಯುವಕರು ಮುಂದಾಗಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ ಆನ್ವೇರಿ ‘ಪ್ರಜಾವಾಣಿ ಗೆ ತಿಳಿಸಿದರು.

ADVERTISEMENT

‘ಕೊರೊನಾಗೆ ಔಷಧಿ ಇಲ್ಲ. ಊರನ್ನು ಸೋಂಕಿನಿಂದ ಕಾಪಾಡಲು ಮುಂದಾಗಿದ್ದೇವೆ’ ಎಂದು ಕಾವಲು ಪಡೆಯ ಲಕ್ಷ್ಮಣ ಕುಸಗೂರ ಹಾಗೂ ದಿನೇಶ ಮಾಯಣ್ಣನವರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.