ADVERTISEMENT

ಕನ್ನಡಿಗರು ಯುಕೆ ಕ್ರಿಕೆಟ್ ಕ್ಲಬ್: ಸೆರ್ರಿ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:35 IST
Last Updated 26 ಡಿಸೆಂಬರ್ 2025, 7:35 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಲಂಡನ್‌: ಇಲ್ಲಿನ ಕನ್ನಡಿಗರು ಹಲವು ವರ್ಷಗಳಿಂದ ಮುನ್ನಡೆಸುತ್ತಿರುವ ‘ಕನ್ನಡಿಗರು ಯುಕೆ ಕ್ರಿಕೆಟ್ ಕ್ಲಬ್‘ (KUKCC) ಸ್ಥಳೀಯ ‘ಸೆರ್ರಿ‘ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಪ್ರವೇಶ ಪಡೆದಿದೆ.

ADVERTISEMENT

ಕನ್ನಡಿಗರೇ ಕಟ್ಟಿರುವ ಈ ಕ್ರಿಕೆಟ್ ಕ್ಲಬ್ ಮುಂದಿನ ಋತುವಿನಲ್ಲಿ ನಡೆಯಲಿರುವ ಸೆರ್ರಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಅಧಿಕೃತವಾಗಿ ಭಾಗವಹಿಸಲಿದೆ. ಈ ಮೂಲಕ ಇಂಗ್ಲಿಷ್ ಲೀಗ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ. 

‘ಕನ್ನಡಿಗರು ಯುಕೆ ಕ್ರಿಕೆಟ್ ಕ್ಲಬ್‘ನ ಎರಡು ತಂಡಗಳಾದ ಇಲೆವನ್‌–1 ಹಾಗೂ ಇಲೆವನ್‌–2 ತಂಡಗಳು ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಸೆರ್ರಿ ವೆಸ್ಟ್ ಸೆಂಟ್ರಲ್ ಡಿವಿಷನ್‌ನಲ್ಲಿ ಸ್ಥಾನ ಪಡೆದಿವೆ ಎಂದು ಕ್ಲಬ್‌ ಸದಸ್ಯರು ತಿಳಿಸಿದ್ದಾರೆ.

ವಿದೇಶದಲ್ಲಿರುವ ಕನ್ನಡ ಸಮುದಾಯಕ್ಕೆ ಇದು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿದೆ. ಎರಡು ಲೀಗ್ ತಂಡಗಳೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವುದು ನಮ್ಮ ಕನ್ನಡದ ಗೌರವವನ್ನು ಹೆಚ್ಚಿಸಿದೆ. ಈ ಮೂಲಕ ಇಂಗ್ಲಿಷ್ ಲೀಗ್ ಕ್ರಿಕೆಟ್‌ನಲ್ಲಿ ಕ್ಲಬ್‌ನ ಅಸ್ತಿತ್ವ ಮತ್ತು ಮೂಲಸೌಕರ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ವೆಬ್‌ಸೈಟ್‌: Website / Play-Cricket Page: https://kannadigaruuk.play-cricket.com/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.