ADVERTISEMENT

Republic Day Celebration: ಕತಾರ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 10:55 IST
Last Updated 27 ಜನವರಿ 2026, 10:55 IST
   

ದೋಹಾ: ಕತಾರ್‌ನ ನಾರ್ತ್ ಸ್ಟಾರ್ ಇಂಟರ್‌ನ್ಯಾಷನಲ್ ಕಿಂಡರ್‌ಗಾರ್ಡನ್‌ನಲ್ಲಿ ಭಾರತದ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಲಾಯಿತು. ಅದರ ನಂತರ ಅಲ್ಲಿ ಉಪಸ್ಥಿತರಿದ್ದವರು ರಾಷ್ಟ್ರದ ಗೌರವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಲು ಅವರು ಮಾತನಾಡಿ ‘ಗಣರಾಜ್ಯೋತ್ಸವವು ರಾಷ್ಟ್ರದ ಆತ್ಮದ ಆಚರಣೆಯಾಗಿದೆ. ನಮ್ಮ ಸಂವಿಧಾನವು ನ್ಯಾಯದ ಮೇಲೆ ನಿರ್ಮಿಸಲಾಗಿದೆ, ಸಮಾನತೆಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಮತ್ತು ಭರವಸೆಯಿಂದ ಪ್ರೇರಿತವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳು, ನೃತ್ಯಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ಭಾರತೀಯ ಕ್ರೀಡಾ ಕೇಂದ್ರದ ಕಾರ್ಯದರ್ಶಿ ಅಬ್ದುಲ್ ಬಶೀರ್ ತುವರಿಕ್ಕಲ್, ನಾರ್ತ್ ಸ್ಟಾರ್ ಶೈಕ್ಷಣಿಕ ಉದ್ಯಮದ ನಿರ್ದೇಶಕ ಅಕ್ಬರ್ ಮತ್ತು ನಾರ್ತ್ ಸ್ಟಾರ್ ಇಂಟರ್‌ನ್ಯಾಷನಲ್ ಕಿಂಡರ್‌ಗಾರ್ಡನ ಪ್ರಾಂಶುಪಾಲರಾದ ಜೀನಾಥುನ್ ನಿಶಾ ಸತ್ತಾರ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ವರದಿ: ಸುಬ್ರಹ್ಮಣ್ಯ ಹೆಬ್ಬಾಗಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.