ADVERTISEMENT

ಲಂಡನ್: ಶಿಕ್ಷಣಕ್ಕೆ ಹೊಸ ತಂತ್ರಜ್ಞಾನ; ಕನ್ನಡಿಗ ವಿವೇಕ್‌ಗೆ ರಾಷ್ಟ್ರೀಯ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 13:08 IST
Last Updated 1 ಡಿಸೆಂಬರ್ 2025, 13:08 IST
<div class="paragraphs"><p>ವಿವೇಕ್ ತೋಂಟದಾರ್ಯ</p></div>

ವಿವೇಕ್ ತೋಂಟದಾರ್ಯ

   

ಲಂಡನ್‌: ತಂತ್ರಜ್ಞಾನ ಮತ್ತು ಡಿಜಿಟಲ್ ಆವಿಷ್ಕಾರ ಒಳಗೊಂಡ ಯೋಜನೆಗಾಗಿ ಲಂಡನ್‌ನಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ವಿವೇಕ್ ತೋಂಟದಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

‘ಅವರ್‌ ಪ್ರಾಜೆಕ್ಟ್‌– ಯುವರ್‌ ಅಪರೆಂಟಿಸ್‌ಶಿಪ್‌’ ಎಂಬ ಯೋಜನೆಗೆ 2025ನೇ ಸಾಲಿನ ಪ್ರಶಸ್ತಿ ಸಿಕ್ಕಿದೆ. 

ADVERTISEMENT

ಪ್ರಶಸ್ತಿ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವಿವೇಕ್ ತೋಂಟದಾರ್ಯ, ‘ಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿದ್ದ ನೀತಿ ಹಾಗೂ ಯೋಜನೆಗಳ ಕುರಿತ ವರದಿ ನಮ್ಮದಾಗಿತ್ತು. ಇದರಲ್ಲಿ ಸ್ಕ್ರಮ್‌ಕನೆಕ್ಟ್‌ ಕನ್ಸಲ್ಟಿಂಗ್‌, ಟ್ಯಾಲೆಂಟ್‌ ಇಂಟರ್‌ನ್ಯಾಷನಲ್‌ ಅಂಡ್‌ ಫುಜಿಟ್ಸು ಜತೆಗೂಡಿದ್ದವು’ ಎಂದಿದ್ದಾರೆ.

‘ನಮ್ಮ ಯೋಜನೆಯ ಭಾಗವಾದ ಅಪ್ಲಿಕೇಷನ್ ಈಗ ಸರ್ಕಾರದ ಡಿಜಿಟಲ್ ವೇದಿಕೆಯಲ್ಲಿ ಸ್ಥಾನ ಪಡೆದಿದೆ. ಇದರಿಂದ ಅಪರೆಂಟಿಸ್‌ಶಿಪ್‌ ನಿರ್ವಹಣೆಯಲ್ಲಿ ಯುವ ಸಮುದಾಯದ ಹುಡುಕಾಟ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ. ಜತೆಗೆ ಅಭ್ಯರ್ಥಿಗಳ ಕುರಿತ ವಿವರ ನೀಡುವ ಆ್ಯಪ್‌ನಿಂದ ಕಂಪನಿಯವರಿಗೂ ಅನುಕೂಲವಾಗಿದೆ’ ಎಂದು ತಿಳಿಸಿದ್ದಾರೆ.

‘ಸದ್ಯ ಬ್ರಿಟನ್‌ನಲ್ಲಿ 8.5 ಲಕ್ಷ ಸಕ್ರಿಯ ಅಭ್ಯರ್ಥಿಗಳು ಇದ್ದಾರೆ. ಇದು ನನಗೆ ಮತ್ತು ನನ್ನ ತಂಡಕ್ಕೆ ಹೆಮ್ಮೆಯ ಸಂಗತಿ. ಈ ಯೋಜನೆಯಲ್ಲಿ ಸ್ಕ್ರಮ್‌ಕನೆಕ್ಟ್‌ ಕನ್ಸಲ್ಟಿಂಗ್‌ ಮತ್ತು ಅದರ ವ್ಯವಸ್ಥಾಪಕ ಮಂಡಳಿ ನಮ್ಮ ತಂಡದ ಮೇಲೆ ಇಟ್ಟಿರುವ ನಂಬಿಕೆಯೂ ಯಶಸ್ಸಿಗೆ ಕಾರಣ’ ಎಂದು ವಿವೇಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.