ಇಸ್ಲಾಮಾಬಾದ್ (ಪಿಟಿಐ): ಪಾಕ್ ಮೂಲದ ನಿಷೇಧಿತ ತಾಲಿಬಾನಿ ನಾಯಕ ಮುಲ್ಲಾ ಫೈಜಲುಲ್ಲಾ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದಾನೆ.
2009ರಿಂದ ಈತ ಅಪ್ಫಾನಿಸ್ತಾನದ ಸ್ವಾತ್ ಪ್ರದೇಶದಲ್ಲಿ ನೆಲೆಸಿದ್ದ. ‘ಮುಲ್ಲಾ ರೇಡಿಯೊ’ ಎಂಬ ಅಡ್ಡ ಹೆಸರಿನಿಂದ ಪ್ರಸಿದ್ಧಿಯಾಗಿರುವ ಮುಲ್ಲಾ, ತನ್ನ 15 ಸಹಾಯಕರೊಂದಿಗೆ ತೆಹರಿಕ್–ಎ– ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಪ್ರದೇಶಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ. 2007–09ರ ಅವಧಿಯಲ್ಲಿ ಈತ ತನ್ನ ‘ಮುಲ್ಲಾ ರೇಡಿಯೊ’ ಎಫ್ಎಂ ಮೂಲಕವೇ ಇಸ್ಲಾಮಾಬಾದ್‌ನಿಂದ ಸುಮಾರು 160 ಕಿ.ಮೀ. ದೂರದಲ್ಲಿ ಪರ್ಯಾಯ ಆಡಳಿತ ನಡೆಸುತ್ತಿದ್ದ.
ಶಾಲೆಗೆ ಹೋಗುವ ಬಾಲಕಿಯರನ್ನೇ ಗುರಿಯಾಗಿಸಿಕೊಂಡು ಮುಲ್ಲಾ ನೇತೃತ್ವದ ತಂಡ ಬಾಂಬ್ ದಾಳಿ ನಡೆಸುತ್ತಿತ್ತು. ಕಳೆದ ವರ್ಷ ಮಲಾಲ ಯೂಸುಪ್ ಝೈ ಮೇಲೆ ಇದೇ ತಂಡ ಗುಂಡಿನ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಪಾಕ್ ಸೇನೆ ಮುಲ್ಲಾ ತಂಡದ ಮೇಲೆ ದಾಳಿ ನಡೆಸಿದಾಗ, ಮುಲ್ಲಾ ಮತ್ತು ಆತನ ಸಹಚರರು ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.