ADVERTISEMENT

ಕಾರ್ಯಾಚರಣೆ ವಿವರ ಪಡೆದ ಪಾಕ್ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:41 IST
Last Updated 4 ಜುಲೈ 2013, 19:41 IST

ಇಸ್ಲಾಮಾಬಾದ್ (ಐಎಎನ್‌ಎಸ್): ಬಲೂಚಿಸ್ತಾನ ಪ್ರಾಂತ್ಯದಲ್ಲಿನ ತಮ್ಮ ಕಾರ್ಯಾಚರಣೆಗಳಿಗಾಗಿ ಐಎಸ್‌ಐ ಮತ್ತು ಎಫ್‌ಸಿ (ಗಡಿ ಪೊಲೀಸರು) ಎಂದಿಗೂ ಸರ್ಕಾರದಿಂದ ಪ್ರಶ್ನೆಗಳನ್ನು ಎದುರಿಸದ ಬಗ್ಗೆ ಈಚೆಗೆ ಅರಿತ ಪಾಕ್ ಪ್ರಧಾನಿ ನವಾಜ್ ಷರೀಫ್ ದಿಗ್ಭ್ರಮೆಗೊಂಡಿದ್ದರು.

ಕ್ವೆಟ್ಟಾದಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಪ್ರಧಾನಿ ಗಮನಕ್ಕೆ ಬಂದಿತು ಎಂದು `ದಿ ನ್ಯೂಸ್' ಪತ್ರಿಕೆ ವರದಿ ಮಾಡಿದೆ.

ಬಲೂಚಿಸ್ತಾನದಲ್ಲಿ 16 ವರ್ಷಗಳವರೆಗೆ ಐಎಸ್‌ಐ, ಎಫ್‌ಸಿ ನಡೆಸಿದ ಕಾರ್ಯಾಚರಣೆಗಳ ಬಗ್ಗೆ ಎಂದಿಗೂ ಸರ್ಕಾರ ಪ್ರಶ್ನಿಸಿರಲಿಲ್ಲ ಅಥವಾ ಇವರ ಕಾರ್ಯಾಚರಣೆಗೆ ಯಾವುದೇ ಸರ್ಕಾರ ಹೊಣೆ ವಹಿಸಿಕೊಂಡಿರಲಿಲ್ಲ ಎಂಬುದು ಸಭೆಯಲ್ಲಿ ಷರೀಫ್‌ಗೆ ತಿಳಿದು ಬಂತು.

`16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಮ್ಮ ಕಾರ್ಯಾಚರಣೆ ಬಗ್ಗೆ ವಿವರಿಸಲು ನಮ್ಮನ್ನು ಕೇಳಲಾಗಿದ್ದು ರಾಜಕೀಯ ಹೊಣೆಗಾರಿಕೆ ವಹಿಸಿಕೊಳ್ಳಲು ಸರ್ಕಾರ ಸಿದ್ಧವಾಗಿದೆ' ಎಂದು ಬಲೂಚಿಸ್ತಾನ ಎಫ್‌ಸಿ ಮತ್ತು ಐಎಸ್‌ಐ ಮುಖ್ಯಸ್ಥರ ವಕ್ತಾರರಾದ ಇನ್‌ಸ್ಪೆಕ್ಟರ್ ಜನರಲ್‌ರೊಬ್ಬರು ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.