ADVERTISEMENT

ಗುರುದ್ವಾರ ಮೇಲಿನ ದಾಳಿ: `ದ್ವೇಷದ ಕೃತ್ಯ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾದ ರಿವರ್‌ಸೈಡ್‌ನಲ್ಲಿಯ ಗುರುದ್ವಾರದ ಮೇಲೆ  ದುಷ್ಕರ್ಮಿಗಳು ನಡೆಸಿದ ದಾಳಿ ದ್ವೇಷ ಸಾಧನೆಯ ಕೃತ್ಯವಾಗಿರುವ ಸಾಧ್ಯತೆ ಇದ್ದು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣವನ್ನು ದ್ವೇಷದ ಕೃತ್ಯ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ ಎಂದು ರಿವರ್‌ಸೈಡ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಕುರಿತು ತನಿಖಾ ಸಂಸ್ಥೆಯ ಸಿಬ್ಬಂದಿ ಸೂಕ್ಷ್ಮ ಅವಲೋಕನ ಕೈಗೊಂಡಿದ್ದು, ಕಾನೂನು ಜಾರಿ ಸಂಸ್ಥೆಗಳು ಇದರ ನೇತೃತ್ವವಹಿಸಿವೆ ಎಂದು ಅಮೆರಿಕ ಸಿಖ್ ಕಾನೂನು ರಕ್ಷಣೆ ಹಾಗೂ ಶಿಕ್ಷಣ ನಿಧಿ (ಎಸ್‌ಎಎಲ್‌ಡಿಇಎಫ್) ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿರ್‌ಪಾಲ್ ಕೌರ್ ತಿಳಿಸಿದರು.

`ರಿವರ್‌ಸೈಡ್ ಪೊಲೀಸರು ಈ ಪ್ರಕರಣವನ್ನು ದ್ವೇಷದ ಕೃತ್ಯ ಎಂದು ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ. ಗುರುದ್ವಾರದ ಗೋಡೆಯ ಮೇಲೆ `ಟೆರರಿಸ್ಟ್' ಎಂದು ಬರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.