ADVERTISEMENT

ಚುನಾವಣೆಗೆ ಸ್ಪರ್ಧೆ: ಪುಟಿನ್ ಟೀಕಾಕಾರ ಅನರ್ಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಮಾಸ್ಕೊ (ಎಎಫ್‌ಪಿ): ಮಾರ್ಚ್ 4ರಂದು ನಡೆಯಲಿರುವ ರಷ್ಯ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ವಿರುದ್ಧ ಸ್ಪರ್ಧಿಸಲು ನೋಂದಾಯಿಸಿದ್ದ ಪಕ್ಷೇತರ ಅಭ್ಯರ್ಥಿ ಗ್ರೆಗೊರಿ ಯಾವ್ಲಿಂಸ್ಕಿ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲಾಗಿದೆ.

ರಷ್ಯದ ಕೇಂದ್ರ ಚುನಾವಣಾ ಆಯೋಗವು ಈ ನಿರ್ಧಾರ ಕೈಗೊಂಡಿದ್ದು, ಗ್ರೆಗೊರಿ ಬೆಂಬಲಿಗರು ಈ ನಿರ್ಧಾರವನ್ನು ಟೀಕಿಸಿದ್ದಾರೆ.

ರಷ್ಯದ ಅಧ್ಯಕ್ಷೀಯ ಚುನಾವಣಾ ನಿಯಮಗಳ ಪ್ರಕಾರ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನೋಂದಣಿ ಮಾಡಿಕೊಳ್ಳಬೇಕಾದರೆ ವ್ಯಕ್ತಿಯೊಬ್ಬರು 20 ಲಕ್ಷ ಜನರಿಂದ ಸಹಿ ಸಂಗ್ರಹಿಸಬೇಕು.

ಪುಟಿನ್ ಟೀಕಾಕಾರ ಗ್ರೆಗೊರಿ ಸಲ್ಲಿಸಿರುವ ನೋಂದಣಿ ಸಹಿಗಳಲ್ಲಿ ಕಾಲು ಭಾಗದಷ್ಟು ಸಹಿಗಳು ನಕಲಿ ಇಲ್ಲವೇ ಛಾಯಾಪ್ರತಿಗಳಾಗಿರುವುದರಿಂದ ಅವರನ್ನು ಅಭ್ಯರ್ಥಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.