ADVERTISEMENT

ಜನಾಂಗೀಯ ನಿಂದನೆ ಮಾಡಿದ್ದ ಆಲ್ಬರ್ಟ್‌ ಐನ್‌ಸ್ಟೀನ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 16:34 IST
Last Updated 17 ಜೂನ್ 2018, 16:34 IST
ಆಲ್ಬರ್ಟ್‌ ಐನ್‌ಸ್ಟೀನ್‌
ಆಲ್ಬರ್ಟ್‌ ಐನ್‌ಸ್ಟೀನ್‌   

ಲಂಡನ್‌: ಜಗತ್ತಿನ ಖ್ಯಾತ ವಿಜ್ಞಾನಿ, ಜರ್ಮನ್‌ನ ಆಲ್ಬರ್ಟ್‌ ಐನ್‌ಸ್ಟೀನ್‌ ಅವರು ತಮ್ಮ ಪ್ರವಾಸದ ಡೈರಿಯಲ್ಲಿ, ಚೀನಿಯರ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ದಿ ಟೆಲಿಗ್ರಾಫ್‌ ವರದಿ ಮಾಡಿದೆ.

ಚೀನಾ, ಸಿಂಗಪುರ, ಹಾಂಕಾಂಗ್, ಜಪಾನ್‌, ಪ್ಯಾಲೆಸ್ಟೀನ್‌ ಮತ್ತು ಸ್ಪೇನ್‌ನಲ್ಲಿ ಐದು ತಿಂಗಳು ನಡೆಸಿದ ಪ್ರವಾಸದ ಅನುಭವಗಳನ್ನು ಐನ್‌ಸ್ಟೀನ್‌ ಡೈರಿಯಲ್ಲಿ ಬರೆದಿಟ್ಟಿದ್ದು, ಅದರಲ್ಲಿ ‘ಚೀನಾವು ಕುರಿ ಬುದ್ಧಿಯ ಜನರಿರುವ ದೇಶ. ಅವರನ್ನು ಮನುಷ್ಯರು ಎನ್ನುವುದಕ್ಕಿಂತ ಯಂತ್ರಗಳು ಎನ್ನುವುದೇ ಸೂಕ್ತ’ ಎಂದು ಬರೆದಿರುವುದಾಗಿ ಅದು ವರದಿ ಮಾಡಿದೆ.

ಜನಾಂಗೀಯವಾದವನ್ನು ‘ಬಿಳಿ ಜನರ ರೋಗ’ ಎಂದು ಜರೆದ, ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದ ಐನ್‌ಸ್ಟೀನ್‌ರ ಬಗ್ಗೆ ಅವರ ಈ ಡೈರಿ ಬೇರೆಯದೇ ಭಾವನೆ ಮೂಡಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ಚೀನಿಯರು ಊಟ ಮಾಡುವಾಗ ಬೆಂಚಿನ ಮೇಲೆ ಕುಳಿತುಕೊಳ್ಳುವುದಿಲ್ಲ. ಆದರೆ, ಬಿಡುವಿನ ವೇಳೆ ಕಳೆಯುವಾಗ ಎಲೆಗಳುಳ್ಳ ಕಟ್ಟಿಗೆಯ ಮೇಲೆ ಮುದುರಿ ಕುಳಿತುಕೊಳ್ಳುತ್ತಾರೆ. ಅವರ ಮಕ್ಕಳು ಕೂಡ ಉತ್ಸಾಹಹೀನರಂತೆ ಕಾಣುತ್ತಾರೆ’ ಎಂದು ಐನ್‌ಸ್ಟೀನ್‌ ಡೈರಿಯಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.