ADVERTISEMENT

ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಹಖಾನಿ ಜಾಲವನ್ನು ನಾಶಪಡಿಸಬೇಕು ಎಂಬ ಒತ್ತಡಕ್ಕೆ  ಮಣಿಯದಿದ್ದರೂ ಪಾಕಿಸ್ತಾನಕ್ಕೆ ಭದ್ರತೆ ಮತ್ತು ನಾಗರಿಕ ನೆರವಿಗೆ ನೀಡಲಾಗುವ ವಾರ್ಷಿಕ ಇನ್ನೂರು ಕೋಟಿ ಡಾಲರ್ ನೆರವು ಮುಂದುವರಿಸಲು ಅಮೆರಿಕ ನಿರ್ಧರಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ತಮಗಿರುವ ಅಧಿಕಾರವನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ನೀಡಲಾಗುವ ನೆರವನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಕಿಸ್ತಾನ ಸರ್ಕಾರವು ಹಖಾನಿ ಜಾಲ ನಾಶಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೂ  ಅಮೆರಿಕದ ಭದ್ರತೆಯ ಹಿತವನ್ನು ಕಾಪಾಡುವ ಉದ್ದೇಶದಿಂದ  ನೆರವನ್ನು ಮುಂದುವರಿಸಲಾಗುತ್ತಿದೆ ಎಂದು ಕ್ಲಿಂಟನ್ ತಿಳಿಸಿದ್ದಾರೆ.

ಪಾಕಿಸ್ತಾನದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ನಾವು ಬದ್ಧರಾಗಿರುವುದರಿಂದ ನೆರವು ಖೋತಾಗೊಳಿಸಿಲ್ಲ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾವು ಅಮೆರಿಕ ಬಗ್ಗೆ ತಾಳಿರುವ ಸಕಾರಾತ್ಮಕ ಧೋರಣೆ ಸಹ ನೆರವು ಮುಂದುವರಿಸಲು ಕಾರಣವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.