ADVERTISEMENT

ಪಾಕ್‌ ನ್ಯಾಯಾಂಗ ಆಯೋಗ ಭೇಟಿ ವಿಳಂಬ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಇಸ್ಲಾಮಾಬಾದ್ / ಲಾಹೋರ್‌ (ಪಿಟಿಐ): ಮುಂಬೈ ದಾಳಿ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಸಲು ಬುಧವಾರ (ಸೆ.11) ಭಾರತಕ್ಕೆ ತೆರಳಬೇಕಿದ್ದ ಪಾಕ್‌ ನ್ಯಾಯಾಂಗ ಆಯೋಗದ ಮಹತ್ವದ ಭೇಟಿಯು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕನಿಷ್ಠ 10 ದಿನಕ್ಕೆ ಮುಂದಕ್ಕೆ ಹೋಗಿದೆ.

‘ಗಣೇಶ ಹಬ್ಬದ ಪ್ರಯುಕ್ತ ಮುಂಬೈನಲಿ್ಲ ನ್ಯಾಯಾ­ಲಯಗಳಿಗೆ ರಜೆ ಇರುವುದರಿಂದ ಈಗ ಸಾಕ್ಷಿಗಳನ್ನು  ವಿಚಾ­ರಣೆಗೆ ಒಳಪಡಿಸಲು ಆಗದು ಎಂದು ಭಾರತ ಸರ್ಕಾರ ತಿಳಿಸಿದ್ದು, ಭೇಟಿಯನು್ನ ಮುಂದೂಡುವಂತೆ ಸೂಚಿಸಿದೆ’ ಎಂದು ಆರೋಪಿಗಳ ಪರ ವಕೀಲ ರಿಯಾಜ್‌ ಅಕ್ರಮ್‌ ಚೀಮಾ ತಿಳಿಸಿದಾ್ದರೆ.
ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆ ವೇಳೆ ರಿಯಾಜ್‌ ಈ ವಿಷಯವನು್ನ ಕೋರ್ಟ್‌ನಲಿ್ಲ ತಿಳಿಸಿದರು.

ನಾ್ಯಯಾಂಗದ ಮುಂದಿನ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬಹುಶಃ ಇನ್ನೊಂದು ವಾರದಲಿ್ಲ ಹೊಸ ದಿನಾಂಕ ನಿಗದಿಯಾಗಬಹುದು ಎನ್ನಲಾಗಿದೆ.
ಆಯೋಗದ ಭಾರತ ಭೇಟಿಯು ಈ ತಿಂಗಳಲಿ್ಲ ಎರಡು ಸಲ ಮುಂದೂಡಿಕೆಯಾದಂತೆ ಆಗಿದೆ. ಭಾರತವು ಈ ಮುಂಚೆ ನೀಡಿದ್ದ ದಿನಾಂಕದ ಪ್ರಕಾರ, ಸೆಪ್ಟೆಂಬರ್‌ ಮೊದಲ ವಾರದಲ್ಲೇ ಆಯೋಗದ ಸದಸ್ಯರು ಅಲಿ್ಲಗೆ ತೆರಳಬೇಕಿತ್ತು. ಆದರೆ ಅಂತರರಾಷ್ಟ್ರೀಯ ವಿಮಾನದ ರದ್ದತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಸೆ.7ರಂದು ಭೇಟಿ ನಿಗದಿಯಾಗಿತ್ತು. ಅಂದು ಪುನಃ ವಿಮಾನ ರದಾ್ದಗಿದ್ದರಿಂದ ಭೇಟಿಯು ರದಾ್ದಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.