ADVERTISEMENT

ಪಾಕ್: ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ, 20 ಉಗ್ರರು, 4 ಸೈನಿಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 4:30 IST
Last Updated 5 ಜೂನ್ 2012, 4:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನ ವಾಯವ್ಯ ಭಾಗದ ಬುಡಕಟ್ಟು ಪ್ರಾಂತ್ಯದ ಸಲಾಲಾ ಪ್ರದೇಶದಲ್ಲಿರುವ ಸೇನೆಯ ಚೆಕ್ ಪೋಸ್ಟ್ ಮೇಲೆ ಉಗ್ರರು ದಾಳಿಮಾಡಿದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು 20 ಉಗ್ರರು ಹಾಗೂ ನಾಲ್ವರು ಸೈನಿಕರು ಹತ್ಯೆಯಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ.

ಬುಡಕಟ್ಟು ಪ್ರಾಂತ್ಯದ ಪಾಕಿಸ್ತಾನ - ಅಫ್ಘಾನಿಸ್ತಾನ  ಗಡಿಭಾಗದಲ್ಲಿರುವ ಸೇನೆಯ ಚೆಕ್ ಪೋಸ್ಟ್ ಮೇಲೆ ಮಂಗಳವಾರ ರಾತ್ರಿ ಉಗ್ರರು ಏಕಾಏಕಿ ದಾಳಿ ಮಾಡಿ ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ಆದರೆ ಉಗ್ರರ ಸಂಖ್ಯೆ ತಿಳಿದು ಬಂದಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಉಗ್ರರ ದಾಳಿ ವೇಳೆ ಪ್ರತಿಯಾಗಿ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸೈನಿಕರು ಸೇರಿದಂತೆ 20 ಉಗ್ರರು ಹತರಾಗಿದ್ದಾರೆ ಎಂದು `ಡಾನ್~ ಪತ್ರಿಕೆ ವರದಿ ಮಾಡಿದೆ.

ಇವರೆಗೆ ಯಾವುದೇ ಉಗ್ರರ ಸಂಘಟನೆ ಈ ದಾಳಿ ಹೊಣೆ ಹೊತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.