ADVERTISEMENT

ಪ್ರೊಫೆಸರ್ ಮನೋಜ್ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್):  ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ  (ಎನ್‌ಎಸ್‌ಎಫ್) ಲಕ್ಷಾಂತರ ಡಾಲರ್‌ಗಳನ್ನು ವಂಚನೆ ಮಾಡಲು ಯತ್ನಿಸಿದ ಆರೋಪವನ್ನು ಫೆಡರಲ್‌ನ್ಯಾಯಾಧೀಶರ ಮಂಡಳಿಯು ಭಾರತ ಮೂಲದ ಅಮೆರಿಕ ಪ್ರೊಫೆಸರ್ ಒಬ್ಬರ ಮೇಲೆ ಹೊರಿಸಿದೆ.

ಮಾರ್ಗನ್ ವಿಶ್ವವಿದ್ಯಾಲಯದ ಸಾರಿಗೆ ಸೌಕರ್ಯ ಎಂಜಿನಿಯರಿಂಗ್ ಪದವಿ ಕಾರ್ಯಕ್ರಮದ ನೇತೃತ್ವದ ವಹಿಸಿರುವ ಮನೋಜ್‌ಕುಮಾರ್ ಜಾ ಅವರು ತಮ್ಮದೇ ಸಂಸ್ಥೆಯೊಂದಕ್ಕೆ ಎನ್‌ಎಸ್‌ಎಫ್ ಮೂಲಕ ಹಣಕಾಸು ನೆರವು ಪಡೆಯುವುದಕ್ಕಾಗಿ ಸಂಶೋಧನಾ ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂಶೋಧನೆ ನಡೆಸುವುದಕ್ಕಾಗಿ ಜಾ ಅವರು 2 ಲಕ್ಷ ಡಾಲರ್ (ಸುಮಾರು 1.10 ಕೋಟಿ ರೂಪಾಯಿ) ಪಡೆದಿದ್ದರು.

ಆದರೆ ಮೊತ್ತವನ್ನು ಅವರು ವೈಯಕ್ತಿಕ ಅಡಮಾನ ಇಡಲು ಹಾಗೂ ಕ್ರೆಡಿಟ್ ಕಾರ್ಡ್ ಪಾವತಿಗೆ ಬಳಸಿದ್ದರು. ಸಂಶೋಧನೆ ನಡೆಸಲು ಅವರ ಪತ್ನಿಗೆ 11,000 ಡಾಲರ್ (ಸುಮಾರು 6 ಲಕ್ಷ ರೂಪಾಯಿ) ನೀಡಿದ್ದರಾದರೂ ಅವರು ಯಾವುದೇ ಕೆಲಸ ಮಾಡಿರಲಿಲ್ಲ. ತಮ್ಮ ಹೆಸರಿಗೆ 6,000 ಡಾಲರ್ ಮೊತ್ತದ ಚೆಕ್ ಬರೆದುಕೊಂಡಿದ್ದರು~ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.