ADVERTISEMENT

ಭಾರತದ ಅವಳಿಗಳಿಗೆ ಸೆರೆವಾಸ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಸಿಂಗಪುರ (ಪಿಟಿಐ): ವೇಶ್ಯಾಗೃಹವನ್ನು ನಿರ್ವಹಿಸುತ್ತಿದ್ದ ಹಾಗೂ ಆರು ವೇಶ್ಯೆಯರ ಸಂಪಾದನೆಯಿಂದ ಜೀವನ ಸಾಗಿಸಲು ತಮ್ಮ  ಸಹಾಯಕರಿಗೆ ನೆರವು ನೀಡಿದ ಭಾರತದ ಅವಳಿ ಸಹೋದರರಿಗೆ  ಸಿಂಗಪುರ ನ್ಯಾಯಾಲಯವು ಮೂರೂವರೆ ತಿಂಗಳ ಸೆರೆವಾಸ ವಿಧಿಸಿದೆ.

ರಮಣ್ ಹಾಗೂ ಲಕ್ಷ್ಮಣನ್ ಸೆಲ್ವರಾಜ್(26) ಅವರು ಜೂನ್ 3ರಂದು ತಮ್ಮ ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯ ದಂಡ ವಿಧಿಸಬಹುದೆಂದು ನಿರೀಕ್ಷಿಸಿದ್ದರು. ಆದರೆ ನ್ಯಾಯಾಲಯ ಸೆರೆವಾಸ ವಿಧಿಸಿರುವುದು ಅವರಿಗೆ ಆಘಾತ ನೀಡಿದೆ ಎಂದು ದಿ ಸ್ಟ್ರೇಟ್ಸ್ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.