ADVERTISEMENT

ಭಾರತೀಯ ಮೂಲದ ನಾಯಕ ನಿಧನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಕ್ವಾಲಾಲಂಪುರ (ಪಿಟಿಐ): ಭಾರತೀಯ ಮೂಲದ ಬುಡಕಟ್ಟು ಜನಾಂಗದ ಹಿರಿಯ ನಾಯಕ ಮತ್ತು ಪೆನಿಂಗ್ ರಾಜ್ಯದ ಮಲೇಷ್ಯಾ ಭಾರತೀಯ ಕಾಂಗ್ರೆಸ್ (ಎಂಐಸಿ) ಮುಖ್ಯಸ್ಥ ಪಿ.ಕೆ. ಸುಬ್ಬಯ್ಯ (63) ಬುಧವಾರ ನಿಧನರಾದರು.

ಮಲಗಿದ್ದಾಗಲೇ ಹೃದಯಾಘಾತಕ್ಕೀಡಾಗಿ ಅಸು ನೀಗಿದ್ದು, ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಸುಬ್ಬಯ್ಯ ಎರಡು ಬಾರಿ ರಾಜ್ಯ ಕಾರ್ಯಕಾರಿ ಪರಿಷತ್ ಸದಸ್ಯರಾಗಿ ಮತ್ತು 2009ರಿಂದ ಎಂಐಸಿಯ ಪೆನಿಂಗ್ ಘಟಕದ ಅಧ್ಯಕ್ಷರಾಗಿದ್ದರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸೆನೆಟ್ ಸದಸ್ಯರಾಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.