ADVERTISEMENT

ಮೋದಿಗೆ ವೀಸಾ: ನಿಲುವು ಬದಲಿಲ್ಲ– ಅಮೆರಿಕ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌(ಪಿಟಿಐ): ಮುಂಬರುವ ಲೋಕಸಭಾ ಚುನಾ­ವಣೆಗೆ ಬಿಜೆಪಿ ಗುಜರಾತ್‌ ಮುಖ್ಯಮಂತ್ರಿ­ಯವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿ ಸಿದರೂ, ನಮ್ಮ ವೀಸಾ ನಿಯಮಾವಳಿ ಯಲ್ಲಿ ಯಾವುದೇ ಬದಲಾವಣೆ ಮಾಡ ಲಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.

‘ಮೋದಿ ಅವರು ಅಮೆರಿಕಕ್ಕೆ ಬರಲು ಇಚ್ಛಿಸಿದ್ದಲ್ಲಿ, ಮತ್ತೆ ಅವರು ಸಾಮಾನ್ಯ­ರಂತೆ ಅರ್ಜಿ ಸಲ್ಲಿಸಲಿ. ಅವರ ಅರ್ಜಿ ಯನ್ನು ದೇಶದ ಕಾನೂನಿನಂತೆ ಪರಿಶೀಲಿ ಸಲಾಗುವುದು. ಪರಿಶೀಲನೆ ನಂತರ ಫಲಿತಾಂಶ ಏನು ಬರಲಿದೆ ಎನ್ನುವು ದನ್ನು ನಾನು ಈಗಲೇ ಊಹಿಸಿ ಹೇಳಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವಕ್ತಾರೆ ಮೇರಿ ಹಾರ್ಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.