ADVERTISEMENT

ರಷ್ಯಾ ಸೇನಾ ವಿಮಾನ ಪತನ: 92 ಜನರ ಸಾವು

ಸಂಭ್ರಮಾಚರಣೆಗೆ ಹೊರಟಿದ್ದವರು ಮಸಣಕ್ಕೆ

ಏಜೆನ್ಸೀಸ್
Published 25 ಡಿಸೆಂಬರ್ 2016, 20:24 IST
Last Updated 25 ಡಿಸೆಂಬರ್ 2016, 20:24 IST
ರಷ್ಯಾ ಸೇನಾ ವಿಮಾನ ಪತನ: 92 ಜನರ ಸಾವು
ರಷ್ಯಾ ಸೇನಾ ವಿಮಾನ ಪತನ: 92 ಜನರ ಸಾವು   

ಮಾಸ್ಕೊ, ರಷ್ಯಾ: ಸಿರಿಯಾದ ಲಟಕಿಯಾ ನಗರಕ್ಕೆ ಹೊರಟಿದ್ದ ರಷ್ಯಾ ಸೇನಾ ವಿಮಾನ ಟಿ.ಯು–154 ಕಪ್ಪು ಸಮುದ್ರದಲ್ಲಿ ಭಾನುವಾರ ಪತನವಾಗಿದೆ. ವಿಮಾನ 8 ಸಿಬ್ಬಂದಿ ಸೇರಿ ಅದರಲ್ಲಿ 92 ಜನರಿದ್ದರು. ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ರಷ್ಯಾ ಘೋಷಿಸಿದೆ.

ವಿಮಾನವು ಲಟಕಿಯಾದಲ್ಲಿರುವ ರಷ್ಯಾ ವಾಯುನೆಲೆಗೆ ತೆರಳುತ್ತಿತ್ತು. ರಷ್ಯಾ ಸೇನೆಯ ವಾದ್ಯವೃಂದದ 64 ಕಲಾವಿದರು, 10 ಮಂದಿ ಸೇನಾ ಅಧಿಕಾರಿಗಳು, ಒಂಬತ್ತು ಪತ್ರಕರ್ತರು ಮತ್ತು ಒಬ್ಬರು ಸಾಮಾಜಿಕ ಕಾರ್ಯಕರ್ತೆ ವಿಮಾನದಲ್ಲಿದ್ದರು. ಲಟಕಿಯಾ ವಾಯುನೆಲೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಅವರು ತೆರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಅವಶೇಷ ಪತ್ತೆ: ಈವರೆಗೆ ನಾಲ್ಕು ಶವಗಳನ್ನು ಪತ್ತೆ ಮಾಡಲಾಗಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿದ್ದಾರೆ. ಅಡ್ಲೆರ್‌ ನಗರದ ಸಮೀಪ ಇರುವ ಸೋಚಿ ನಗರದ ತೀರದಿಂದ 1.5 ಕಿ.ಮೀ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.

ಅಡ್ಲೆರ್‌ ನಗರದ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡು ಬೆಳಿಗ್ಗೆ 5.25ಕ್ಕೆ (ಸ್ಥಳೀಯ ಕಾಲಮಾನ) ವಿಮಾನ ಹಾರಾಟ ಆರಂಭಿಸಿತ್ತು. ಆದರೆ 5.27ಕ್ಕೆ ರೇಡಾರ್‌ ಸಂಪರ್ಕ ಕಳೆದುಕೊಂಡಿತು. ಆಗಲೇ ಅದು ಪತನವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.