ADVERTISEMENT

ವಂಚನೆ: ಭಾರತೀಯ ಸಂಜಾತ ವೈದ್ಯ ತಪ್ಪೊಪ್ಪಿಗೆ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನ್ಯೂಯಾರ್ಕ್‌: ಆರೋಗ್ಯ ವಿಮಾ ಕಂಪನಿಗೆ ವಂಚನೆ ಎಸಗಿದ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಸಂಜಾತ ವೈದ್ಯರೊಬ್ಬರು ಇಲ್ಲಿನ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಶ್ರೀಕೃಷ್ಣ ಚೆರುವು ಅವರು ವಿಚಾರಣೆ ವೇಳೆ ಅಮೆರಿಕದ ಹಿರಿಯ ಜಿಲ್ಲಾ ನಾಯಾಧೀಶ ವಿಲಿಯಂ ಸ್ಕ್ರೆಟ್ನಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

‘ಈ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಜೈಲು ಹಾಗೂ ₹67.48 ಲಕ್ಷ (1 ಲಕ್ಷ ಅಮೆರಿಕ ಡಾಲರ್‌) ದಂಡ ವಿಧಿಸುವ ಸಾಧ್ಯತೆ ಇದೆ’ ಎಂದು ವಕೀಲ ಜೇಮ್ಸ್‌ ಕೆನಡಿ ಹೇಳಿದ್ದಾರೆ.

ADVERTISEMENT

2011 ಜನವರಿ ಮತ್ತು 2014ರ ಮೇ ನಡುವೆ ಅಮ್ಹೆರ್ಸ್ಟ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ವೇಳೆ ಶ್ರೀಕೃಷ್ಣ ಅವರು ವಿವಿಧ ಆರೋಗ್ಯ ವಿಮೆಗಳ ಮೂಲಕ ಬ್ಲ್ಯೂಕ್ರಾಸ್‌ ಮತ್ತು ಬ್ಲ್ಯೂಶೀಲ್ಡ್‌ ವಿಮಾ ಕಂಪನಿಯಿಂದ ಉದ್ದೇಶಪೂರ್ವಕವಾಗಿ ವಿಮಾ ಸೌಲಭ್ಯ ಪಡೆದಿದ್ದರು. ಇದೇ ರೀತಿ ಹಲವು ಆರೋಗ್ಯ ವಿಮೆ ಹಣ ಮರುಪಾವತಿ ಪಡೆಯುವ ಮೂಲಕ ಕಂಪನಿಗಳಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.