ADVERTISEMENT

ವಿಮಾನ ಹುಡುಕಾಟ ಶೀಘ್ರ ಸ್ಥಗಿತ

ಏಜೆನ್ಸೀಸ್
Published 23 ಮೇ 2018, 19:00 IST
Last Updated 23 ಮೇ 2018, 19:00 IST

ವಿಮಾನ ಹುಡುಕಾಟ ಶೀಘ್ರವೇ ಸ್ಥಗಿತ

ಕ್ವಾಲಾಲಂಪುರ(ಎಪಿ): ನಾಪತ್ತೆಯಾಗಿರುವ ಮಲೇಷ್ಯಾ ಏರ್‌ಲೈನ್ಸ್‌ನ ವಿಮಾನ 370 ಹುಡುಕಾಟವನ್ನು ಮುಂದಿನ ವಾರ ಸ್ಥಗಿತಗೊಳಿಸಲಾಗುವುದು ಎಂದು ಮಲೇಷ್ಯಾದ ನೂತನ ಸಾರಿಗೆ ಸಚಿವ ಆಂಟೊನಿ ಲೋಕ್ ತಿಳಿಸಿದ್ದಾರೆ.

ವಿಮಾನ ಹುಡುಕಾಟವನ್ನು ಏಪ್ರಿಲ್‌ ತಿಂಗಳಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಓಷಿಯನ್‌ ಇನ್ಫಿನಿಟಿ ಸಂಸ್ಥೆ ಮನವಿ ಮಾಡಿದ್ದರಿಂದ, ಇದೇ 29ರ ತನಕ ವಿಮಾನ ಹುಡುಕಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.