ADVERTISEMENT

ಶಾಹೀದ್‌ ಪಾಕ್‌ನ ಪ್ರಧಾನಿ

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತದಿಂದ ಷರೀಫ್‌ ಬೆಂಬಲಿಗ ಆಯ್ಕೆ

ಪಿಟಿಐ
Published 1 ಆಗಸ್ಟ್ 2017, 19:30 IST
Last Updated 1 ಆಗಸ್ಟ್ 2017, 19:30 IST
ಶಾಹೀದ್‌ ಪಾಕ್‌ನ ಪ್ರಧಾನಿ
ಶಾಹೀದ್‌ ಪಾಕ್‌ನ ಪ್ರಧಾನಿ   

ಇಸ್ಲಾಮಾಬಾದ್‌ : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹೀದ್‌ ಖಾಕನ್‌ ಅಬ್ಬಾಸಿ ಆಯ್ಕೆಯಾಗಿದ್ದಾರೆ. 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಬ್ಬಾಸಿ ಅವರು 221 ಮತಗಳನ್ನು ಪಡೆಯುವ ಮೂಲಕ ಪ್ರಧಾನಿ ಹುದ್ದೆಗೆ ಆಯ್ಕೆಯಾದರು. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ನವೀದ್‌ ಖಮರ್‌ ಅವರಿಗೆ 47 ಹಾಗೂ ಪಾಕಿಸ್ತಾನ ತೆಹ್ರೀಕ್‌–ಇ– ಇನ್ಸಾಫ್‌ ಪಕ್ಷದ ಶೇಖ್‌ ರಶೀದ್‌ ಅಹ್ಮದ್‌ ಅವರಿಗೆ 33 ಮತಗಳು ಲಭ್ಯವಾದವು.

ಅಬ್ಬಾಸಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ನಡೆಸಿದ ಪ್ರಯತ್ನಗಳು ವಿಫಲವಾದವು. ಮುತ್ತಾಹಿದಾ ಖ್ವಾಮಿ ಮೂವೆಮೆಂಟ್‌ (ಎಂಕ್ಯೂಎಂ) ಪಕ್ಷದ 24 ಸಂಸದರು ತಮ್ಮ ಅಭ್ಯರ್ಥಿ ಕಿಶ್ವಾರ್‌ ಝೆಹ್ರಾ ಅವರನ್ನು ಕಣದಿಂದ ಹಿಂದೆ ಸರಿಸಿ, ಅಬ್ಬಾಸಿ ಅವರನ್ನು ಬೆಂಬಲಿಸಿದರು.

ಪನಾಮಾ ಪೇಪರ್ಸ್‌ ಸೋರಿಕೆ ಪ್ರಕರಣದಿಂದಾಗಿ ಶುಕ್ರವಾರ ನವಾಜ್‌ ಷರೀಫ್‌ ಅವರನ್ನು ಸುಪ್ರೀಂ ಕೋರ್ಟ್‌ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿತ್ತು. ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವುದಕ್ಕಾಗಿಯೇ ರಾಷ್ಟ್ರೀಯ ಅಸೆಂಬ್ಲಿಯ ವಿಶೇಷ ಅಧಿವೇಶನ ಕರೆಯಲಾಗಿತ್ತು. ನವಾಜ್‌ ಷರೀಫ್‌ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್‌– ನವಾಜ್‌ ಪಕ್ಷವು ಪ್ರಧಾನಿ ಅಭ್ಯರ್ಥಿಯಾಗಿ ಶಾಹೀದ್‌ ಖಾಕನ್‌ ಅಬ್ಬಾಸಿ ಅವರ ಹೆಸರನ್ನು ಸೂಚಿಸಿತ್ತು. ಅಬ್ಬಾಸಿ ಅವರು ನವಾಜ್‌ ಷರೀಫ್‌ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ.

ADVERTISEMENT

ಅಬ್ಬಾಸಿ ಅವರು ತಾತ್ಕಾಲಿಕವಾಗಿ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಸಹೋದರ ಶೆಹ್ಬಾಜ್‌ ಷರೀಫ್‌ ಅವರು ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗುವ ತನಕ ಅಬ್ಬಾಸಿ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ಹಿಂದೆಯೂ ತಾತ್ಕಾಲಿಕ ಅವಧಿಗೆ ಪ್ರಧಾನಿಯೊಬ್ಬರನ್ನು ಆಯ್ಕೆ ಮಾಡಿ ನಂತರ ಅವರಿಂದ ರಾಜೀನಾಮೆ ಪಡೆದ ಉದಾಹರಣೆ ಪಾಕಿಸ್ತಾನದಲ್ಲಿ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.