ADVERTISEMENT

ಸವಿತಾ ಸಾವು: ಇಂದು ತಜ್ಞರ ವರದಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಲಂಡನ್ (ಪಿಟಿಐ): ದಂತ ವೈದ್ಯೆ ಸವಿತಾ ಹಾಲಪ್ಪನವರ ದುರಂತ ಸಾವಿಗೆ ಕಾರಣವಾದ ಐರ‌್ಲೆಂಡ್ ಸರ್ಕಾರದ `ಗರ್ಭಪಾತ ನಿಷೇಧ~ ಕಾನೂನಿಗೆ ಸಂಬಂಧಸಿದಂತೆ ತಜ್ಞರ ತಂಡ ಸಿದ್ಧಪಡಿಸಿರುವ ವರದಿ ಮಂಗಳವಾರ ಸಂಪುಟದ ಮುಂದೆ ಬರಲಿದೆ.

ವ್ಯಾಪಕ ಟೀಕೆಗೆ ಒಳಗಾಗಿರುವ ದೇಶದ ಕಾನೂನು ಕುರಿತು ತಜ್ಞರು ಸಿದ್ಧಪಡಿಸಿರುವ ವರದಿಯನ್ನು ಸಂಪುಟದ ಗಮನಕ್ಕೆ ತರುವುದಾಗಿ ಐರ‌್ಲೆಂಡ್ ಸರ್ಕಾರದ ಆರೋಗ್ಯ ಸಚಿವ ಜೇಮ್ಸ ರೇಲಿ ಸೋಮವಾರ ತಿಳಿಸಿದ್ದಾರೆ.
ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದ ಸವಿತಾ ಹಾಲಪ್ಪನವರ ದುರಂತ ಸಾವು ಮತ್ತು ಗರ್ಭಪಾತ ನಿಷೇಧ ಕಾನೂನಿನ ವಿರುದ್ಧ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಕೂಡಲೇ ಎಚ್ಚೆತ್ತುಕೊಂಡ ಐರ‌್ಲೆಂಡ್ ಸರ್ಕಾರ ಈ ಕುರಿತು ಪರಿಶೀಲಿಸಿ     ವರದಿ ನೀಡಲು ತಜ್ಞರ ತಂಡವನ್ನು ನೇಮಿಸಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.